Advertisement

Gyanvapi mosque ಸರ್ವೆ ಆದೇಶವನ್ನು ಕಾಯ್ದಿರಿಸಿದ ಅಲಹಾಬಾದ್ ಕೋರ್ಟ್

05:49 PM Jul 27, 2023 | Team Udayavani |

ಹೊಸದಿಲ್ಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸರ್ವೆ ನಡೆಸುವ ಬಗ್ಗೆ ತನ್ನ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಆಗಸ್ಟ್ 3ರಕ್ಕೆ ಕಾಯ್ದಿರಿಸಿದೆ. ಹೀಗಾಗಿ ಜ್ಞಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸಮೀಕ್ಷೆ ನಡೆಸಲು ಆಗಸ್ಟ್ 3 ರವರೆಗೆ ತಡೆಹಿಡಿಯಲಾಗಿದೆ.

Advertisement

ಸರ್ವೆಗೆ ತಡೆ ಹಿಡಿಯುವಂತೆ ಜ್ಞಾನವಾಪಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಸರ್ವೋಚ್ಛ ನ್ಯಾಯಾಲಯವು ಸರ್ವೆಗೆ ತಾತ್ಕಾಲಿಕ ತಡೆ ನೀಡಿತ್ತು. ಇದರ ಬಳಿಕ ಮಸೀದಿ ಸಮಿತಿಯು ಜುಲೈ 25 ರಂದು ಅಲಹಾಬಾದ್ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿತ್ತು, ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಿತಿಗೆ ಸಮಯಾವಕಾಶ ನೀಡಿತ್ತು.

ಇದನ್ನೂ ಓದಿ:Grand Slam ವೀರ ಜೊಕೊವಿಕ್ ಯಾಕೆ ನಡಾಲ್-ಫೆಡರರ್ ನಂತೆ ಅಭಿಮಾನ ಸಂಪಾದಿಸಲಿಲ್ಲ?

ಬುಧವಾರ ಹೈಕೋರ್ಟ್ ಇಂದಿನವರೆಗೆ ಸರ್ವೆ ನಡೆಸದಂತೆ ತಡೆ ನೀಡಿತ್ತು.

ನಾವು ಯಾವುದೇ ಕಾರಣಕ್ಕೂ ಮಸೀದಿಯ ಕಟ್ಟಡದ ರಚನೆಯನ್ನು ನಾಶ ಮಾಡುವುದಿಲ್ಲ ಎಂದು ಹಿರಿಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಯು ಬುಧವಾರದ ವಿಚಾರಣೆಯ ವೇಳೆ ಕೋರ್ಟ್ ಗೆ ಹೇಳಿದ್ದಾರೆ.

Advertisement

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿಯ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ದಿವಾಕರ್ ಗುರುವಾರ ಹೆಚ್ಚಿನ ವಿಚಾರಣೆಗೆ ವಿಷಯವನ್ನು ಮುಂದೂಡಿದ್ದರು. ಅಲ್ಲಿಯವರೆಗೂ ಎಎಸ್‌ಐ ಸಮೀಕ್ಷೆಗೆ ತಡೆಯಾಜ್ಞೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next