Advertisement

Twins Village: ಇದು ಅವಳಿ ಮಕ್ಕಳ ಗ್ರಾಮ… ಇಲ್ಲಿದ್ದಾರೆ 450ಕ್ಕೂ ಹೆಚ್ಚು ಅವಳಿ-ಜವಳಿ!…

04:34 PM Nov 18, 2023 | ಸುಧೀರ್ |

ದೇಶದ ನಾನಾ ಭಾಗಗಳು ಒಂದಲ್ಲಾ ಒಂದು ರಿತೀಯ ವಿಶೇಷತೆಗಳನ್ನು ಹೊಂದಿರುತ್ತವೆ, ಕೆಲವೊಂದು ಸಾಮಾನ್ಯವಾಗಿರುತ್ತದೆ ಇನ್ನು ಕೆಲವೊಂದು ಅಸಾಮಾನ್ಯವಾಗಿರುತ್ತವೆ. ಅದೇ ರೀತಿ ಭಾರತದಲ್ಲೂ ಒಂದು ಗ್ರಾಮವಿದೆ ಅಲ್ಲಿಯೂ ಒಂದು ವಿಶೇಷತೆ ಇದೆ, ಇಲ್ಲಿನ ಈ ವಿಶೇಷತೆಯಿಂದಲೇ ಈ ಗ್ರಾಮಕ್ಕೆ ಅದರದ್ದೇ ಆದ ಹೆಸರೂ ಬಂದಿದೆ.

Advertisement

ಒಂದು ಊರಿನಲ್ಲಿ ಒಬ್ಬರೋ ಇಬ್ಬರೋ ಅವಳಿಗಳು ಇರಬಹುದು, ಆದರೆ ಈ ಗ್ರಾಮದಲ್ಲಿ 450ಕ್ಕೂ ಹೆಚ್ಚು ಮಂದಿ ಅವಳಿಗಳೇ ಇದ್ದಾರಂತೆ.

ಹೌದು ಕೇರಳದ ಮಲಪ್ಪುರಂ ಜಿಲ್ಲೆಯ ಒಂದು ಹಳ್ಳಿಯಾದ ಕೊಡಿನ್ಹಿ ಇಂತಹ ಒಂದು ಅದ್ಭುತಕ್ಕೆ ಹೆಸರುವಾಸಿಯಾಗಿದೆ. ಈ ಗ್ರಾಮಕ್ಕೆ ಇನ್ನೊಂದು ಹೆಸರೇ ‘ಟ್ವಿನ್ ಟೌನ್’ (ಅವಳಿ ನಗರ) ಎಂದು.

ಕೇರಳದ ಕೋಡಿನ್ಹಿ ಗ್ರಾಮವು ಅವಳಿಗಳ ಗ್ರಾಮ ಎಂದು ಪ್ರಸಿದ್ಧಿ ಪಡೆದಿದೆ. ಕೊಚ್ಚಿಯಿಂದ ಸುಮಾರು 150 ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಸುಮಾರು 2,000 ಕುಟುಂಬಗಳು ವಾಸವಾಗಿವೆ. 2017ರ ಲೆಕ್ಕಾಚಾರದ ಪ್ರಕಾರ ಈ ಕುಟುಂಬಗಳಲ್ಲಿ ಕನಿಷ್ಠ 400ಕ್ಕೂ ಹೆಚ್ಚು ಅವಳಿಗಳು ಇದ್ದಾರೆ ಎಂದು ಹೇಳಲಾಗಿದೆ.

Advertisement

ಪ್ರಪಂಚದ ಉಳಿದ ಭಾಗಗಳಲ್ಲಿ ಸರಾಸರಿ ದಾಖಲೆಯು 1000 ಹೆರಿಗೆಗೆ 6 ಅವಳಿಗಳು ಜನಿಸಿದರೆ, ಈ ಗ್ರಾಮದಲ್ಲಿ ಪ್ರತಿ 1000 ಹೆರಿಗೆಗೆ 42 ಅವಳಿ ಮಕ್ಕಳು ಜನಿಸುತ್ತಾರಂತೆ ಇದು ವಿಶ್ವದಲ್ಲೇ ಅತೀ ಹೆಚ್ಚು ಅವಳಿಗಳನ್ನು ಪಡೆದಿರುವ ಗ್ರಾಮ ಎಂದು ಪ್ರಸಿದ್ಧಿಯನ್ನೂ ಪಡೆದಿದೆ.

ಸಂಶೋಧಕರು ಹೇಳುವುದೇನು ?
ಅಕ್ಟೋಬರ್ 2016 ರಲ್ಲಿ, CSIR, ಹೈದರಾಬಾದ್, ಕೇರಳ ಯೂನಿವರ್ಸಿಟಿ ಆಫ್ ಫಿಶರೀಸ್, ಓಷನ್ ಸ್ಟಡೀಸ್ (KUFOS), ಲಂಡನ್ ವಿಶ್ವವಿದ್ಯಾಲಯ, ಜರ್ಮನಿ ಸೇರಿದಂತೆ ವಿವಿಧ ಸಂಸ್ಥೆಗಳ ಸಂಶೋಧಕರ ತಂಡವು ಈ ವಿದ್ಯಮಾನವನ್ನು ತನಿಖೆ ಮಾಡಲು ಗ್ರಾಮಕ್ಕೆ ಭೇಟಿ ನೀಡಿತು. ಸಂಶೋಧಕರು ತಮ್ಮ ಅಧ್ಯಯನದ ಭಾಗವಾಗಿ ಲಾಲಾರಸ ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಿ ಸಂಶೋಧನೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಇದರ ಬಳಿಕ ಕೆಲವರು ಇಲ್ಲಿನ ಆಹಾರ ಪದ್ಧತಿ ನೀರಿನ ಮೂಲಗಳಿಂದ ಈ ರೀತಿ ಆಗಿರಬಹುದು ಎಂದು ಹೇಳಿದ್ದಾರೆ ಆದರೆ ಇದಕ್ಕೂ ಯಾವುದೇ ಪುರಾವೆಗಳಿಲ್ಲ. ಇನ್ನೂ ಇದರ ಬಗೆಗೆ ಸಂಶೋಧನೆಗಳು ನಡೆಯುತ್ತಲೇ ಇದೆ.

ಇಲ್ಲಿನ ತರಗತಿಗಳಲ್ಲಿ ಕನಿಷ್ಠ ಎರಡು ಅಥವಾ ಮೂರು ಅವಳಿ ಜೋಡಿಗಳು ಇರುತ್ತಾರಂತೆ ಅವರನ್ನು ಗುರುತಿಸುವುದು ಕಷ್ಟಸಾಧ್ಯ ನೋಡಲು ಇಬ್ಬರೂ ಒಂದೇ ತರಹ ಇರುವ ಕಾರಣ ಯಾರು ಯಾರೆಂದು ತಿಳಿಯುವುದು ಕಷ್ಟ.

1940 ರಿಂದ ಅವಳಿಗಳ ಜನನ:
ಕೊಡಿನ್ಹಿಯಲ್ಲಿ ಅವಳಿ ಜನನದ ವಿದ್ಯಮಾನವು 1940 ರ ದಶಕದಲ್ಲಿ ಮೊದಲ ಬಾರಿಗೆ ಗಮನಕ್ಕೆ ಬಂದಿತು, ಆದರೆ 1990 ರ ದಶಕದ ಅಂತ್ಯದಲ್ಲಿ ಅವಳಿ ಜನನಗಳ ಸಂಖ್ಯೆಯು ಹೆಚ್ಚಾಗಲು ಆರಂಭವಾಯಿತು ಅಂದಿನಿಂದ ಇಂದಿನವರೆಗೆ ಜನನ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ಇಲ್ಲಿನ ಗ್ರಾಮದ ಜನ ಹೇಳುತ್ತಾರೆ.

– ಸುಧೀರ್. ಎ

Advertisement

Udayavani is now on Telegram. Click here to join our channel and stay updated with the latest news.

Next