Advertisement

ಸ್ಮಾರ್ಟ್‌ಸಿಟಿ ಎಲ್ಲ ಅನುದಾನ ದಕ್ಷಿಣಕ್ಕೆ ಮಾತ್ರ

05:38 AM Feb 26, 2019 | Team Udayavani |

ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸ್ಮಾರ್ಟ್‌ಸಿಟಿ ಅನುದಾನ ದೊರೆತಿಲ್ಲ. ಹಾಗಾಗಿ ಈ ಕ್ಷೇತ್ರವನ್ನು ಇನ್ನೂ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಹೇಳಿದರು.

Advertisement

ವಿದ್ಯಾನಗರದ ಎಸ್‌.ಎ. ರವೀಂದ್ರನಾಥ್‌ ಉದ್ಯಾನದಲ್ಲಿ ಸೋಮವಾರ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಏರ್ಪಡಿಸಿದ್ದ ಪ್ರಧಾನಿ ನರೇಂದ್ರಮೋದಿ ಮನ್‌ ಕೀ ಬಾತ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಈ ಕ್ಷೇತ್ರವೂ ಅಭಿವೃದ್ಧಿಯಾಗಬೇಕಿದೆ. ಆದರೆ, ನಮ್ಮ ಕ್ಷೇತ್ರಕ್ಕೆ ಸ್ಮಾರ್ಟ್‌ಸಿಟಿ ಅನುದಾನ ನೀಡಿಲ್ಲ. ಎಲ್ಲವನ್ನೂ ದಕ್ಷಿಣ ಕ್ಷೇತ್ರಕ್ಕೆ ನೀಡಲಾಗಿದೆ. ಇದರಿಂದ ನಾವು ಜನರಿಗೆ ಉತ್ತರ ನೀಡುವುದೇ ಕಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಂಬರುವ ಮಹಾನಗರಪಾಲಿಕೆ ಚುನಾವಣೆಯಲ್ಲಿ ನಾವೇ ಗೆದ್ದು ಅಧಿಕಾರ ಹಿಡಿಯುತ್ತೇವೆ. ಗೆದ್ದ ಮೇಲೆ ಸ್ವತ್ಛತೆ, ಪಾರ್ಕ್‌ ಅಭಿವೃದ್ಧಿ, ಕುಡಿಯುವ ನೀರು ಸೇರಿದಂತೆ ಜನರಿಗೆ ಅತ್ಯವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು. ಟಿಕೆಟ್‌ಗಾಗಿ ಈಗಾಗಲೇ ಸಾಕಷ್ಟು ಮಂದಿ ಮನವಿ ಸಲ್ಲಿಸಿದ್ದು, ವಾರ್ಡ್‌ನಲ್ಲಿ ಅವರಿಗಿರುವ ಅರ್ಹತೆ ಆಧಾರದ ಮೇಲೆ ಜನರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್‌ ವಿತರಿಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಉದ್ಯಾನದಲ್ಲಿನ ನೂರಾರು ವಾಯುವಿಹಾರಿಗಳು, ಮಹಿಳೆಯರು, ಜನರು ತಮ್ಮ ಅಭಿಪ್ರಾಯಗಳನ್ನು ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಬಿಜೆಪಿ ಮುಖಂಡರಾದ ಕಡ್ಲೆಬಾಳು ಧನಂಜಯ್‌, ದಿಳ್ಳೆಪ್ಪ, ಬಾಮಾ ಬಸವರಾಜ್‌, ಮಾಜಿ ಮೇಯರ್‌ ವಸಂತ್‌ಕುಮಾರ್‌, ಎ.ಜಿ. ವೀರೇಶ್‌, ಕಂದಗಲ್‌ ಪಾಟೀಲ್‌, ಕಡ್ಲೆಬಾಳು ಶಿವಕುಮಾರ್‌, ಕರಿಯಪ್ಪ, ಮುಕುಂದಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next