Advertisement
ಕೊರೊನಾ ವೈರಸ್ ಸೋಂಕು ಕುರಿತು ವಿಧಾನಸೌಧ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.21ರಿಂದ ಬುಧವಾರದವರೆಗೂ ಬೆಂಗ ಳೂರಿನ ವಿಮಾನ ನಿಲ್ದಾಣದಲ್ಲಿ 42,283 ಪ್ರಯಾಣಿ ಕರನ್ನು ತಪಾ ಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ಕೊರೊನಾ ಬಾಧಿತ 11 ದೇಶಗಳಲ್ಲಿ ಪ್ರವಾಸ ಕೈಗೊಂ ಡಿದ್ದ 468 ಪ್ರಯಾ ಣಿಕರನ್ನು ಗುರುತಿಸಿ ತಪಾಸಣೆ ನಡೆಸಿ ಮನೆ ಗಳಲ್ಲಿ ಪ್ರತ್ಯೇಕ ವಾಗಿ ಇರಿಸಲಾಗಿದೆ.
Related Articles
Advertisement
ತ್ವರಿತ ಪ್ರಕ್ರಿಯಾ ತಂಡ ರಚನೆ: ರಾಜ್ಯಮಟ್ಟದ ನೋಡಲ್ ತಂಡ ಹಾಗೂ ಎಲ್ಲ ಜಿಲ್ಲೆಗಳಲ್ಲಿ ತ್ವರಿತ ಪ್ರಕ್ರಿಯಾ ತಂಡ ರಚಿಸಲಾಗಿದೆ. ಜತೆಗೆ, ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳೊಂದಿಗೆ ಪ್ರತಿದಿನ ಸಭೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಸಹಾಯವಾಣಿಗೆ 7,366 ಕರೆ: ಕೊರೊನಾ ಕಾಯಿಲೆ ಕುರಿತು ಮಾಹಿತಿಗೆ 104 ಆರೋಗ್ಯ ಸಹಾಯವಾಣಿ ಇದ್ದು, ಈವರೆಗೆ 7,366 ಕರೆಗಳು ಬಂದಿವೆ. ವಿದೇಶದಿಂದ ಬಂದು ಸೋಂಕಿತರಾಗಿದ್ದರೆ ಅವರ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ತಿಳಿಸುವಂತೆ ಸಚಿವರು ಮನವಿ ಮಾಡಿದರು.
ಸಹೋದ್ಯೋಗಿಗೆ ಸೋಂಕಿಲ್ಲ: ಕೊರೊನಾ ಸೋಂಕಿತ ಟೆಕ್ಕಿ ರೂಮ್‌ಮೇಟ್ ಹಾಗೂ ಆತನ ಸಹೋದ್ಯೋಗಿಗೂ ವೈದ್ಯರು ಕೊರೊನಾ ಸೋಂಕು ಪರೀಕ್ಷೆ ಮಾಡಿದ್ದು, ಇವರಿಬ್ಬರಿಗೂ ಸೋಂಕು ತಗುಲಿಲ್ಲ ಎಂದು ರಾಜೀವ್‌ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್ ತಿಳಿಸಿದ್ದಾರೆ.
ಕೊರೊನಾ ಪರೀಕ್ಷಾ ವರದಿಗಳ ಕುರಿತು ಮಾಹಿತಿ ನೀಡಿದ ಅವರು, ಟೆಕ್ಕಿಯ ರೂಮ್‌ಮೇಟ್, ಸಹೋದ್ಯೋಗಿ, ಮಂಗಳವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂದ ಮೂರು ಮಂದಿ ಸೇರಿ ಒಟ್ಟು ಐದು ಮಂದಿಗೆ ಪರೀಕ್ಷೆ ಮಾಡಲಾಗಿದೆ. ಎಲ್ಲರ ವರದಿಗಳೂ ನೆಗೆಟಿವ್ ಬಂದಿದ್ದು, ನಾಳೆ ಬೆಳಗ್ಗೆಯೊಳಗೆ ಎಲ್ಲರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಅಪಾರ್ಟ್‌ಮೆಂಟ್ ಸಂಪೂರ್ಣ ತಲಾಶ್: ಟೆಕ್ಕಿ ವಾಸವಿದ್ದ ಬೆಂಗಳೂರಿನ ಅಪಾರ್ಟ್‌ಮೆಂಟ್‌ನ ಎಲ್ಲಾ ಮನೆಗಳ ನಿವಾಸಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಂಗಳವಾರ ಹಾಗೂ ಬುಧವಾರ ಅಲ್ಲಿಯೇ ಇದ್ದುಕೊಂಡು 82 ಮನೆಗಳ 371 ಮಂದಿಯನ್ನು ನೇರವಾಗಿ ಭೇಟಿ ಮಾಡಿ, ವಿಚಾರಣೆ ನಡೆಸಿ ಅಗತ್ಯವಿರುವವರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಜತೆಗೆ ಇಬ್ಬರು ಆಶಾಕಾರ್ಯಕರ್ತರು ಹಾಗೂ ಆರೋಗ್ಯ ಸಹಾಯಕಿಯರು ಆರೋಗ್ಯ ಸಮೀಕ್ಷೆಯನ್ನು ಮಾಡಿದ್ದಾರೆ.
ಬುಧವಾರ ರಾತ್ರಿ ವೇಳೆಗೆ ಅಪಾರ್ಟ್‌ಮೆಂಟ್ ನಿವಾಸಿಗಳ ತಪಾಸಣೆ ಮುಕ್ತಾಯವಾಯಿತು. ಯಾರಲ್ಲೂ ಅನಾರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಎಲ್ಲಾ ನಿವಾಸಿಗಳು ಸುರಕ್ಷಿತವಾಗಿದ್ದಾರೆ. ಕೆಲ ನಿವಾಸಿಗಳು ಅನಗತ್ಯ ಭಯಕ್ಕೆ ಒಳಗಾಗಿದ್ದು, ಅವರೊಂದಿಗೆ ಆಪ್ತ ಸಮಾಲೋಚನೆ ಮಾಡಿ ಮಾಹಿತಿ ನೀಡುವುದರ ಜತೆಗೆ ಧೈರ್ಯ ತುಂಬಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಸುಧಾಕರ್ ತಿಳಿಸಿದ್ದಾರೆ.
ಬೀದರ್‌ನಲ್ಲಿ ಮೂವರಿಗೆ ಕೊರೊನಾ ಸೋಂಕು ಶಂಕೆಬೀದರ: ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ರುವ ಮೂವರು ವ್ಯಕ್ತಿಗಳಿಗೆ ಬುಧವಾರ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಮೂವರ ರಕ್ತ ಮತ್ತು ಗಂಟಲು ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ. ಮೂವರಲ್ಲಿ ಇಬ್ಬರು ಬೀದರ, ಇನ್ನೊಬ್ಬರು ಔರಾದ ತಾಲೂಕಿನವರಾಗಿದ್ದಾರೆ. ಕತಾರ್‌ನಿಂದ ವ್ಯಕ್ತಿ ಯೊಬ್ಬ ಇತ್ತೀಚೆಗೆ ತಮ್ಮೂರಿಗೆ ಆಗಮಿಸಿದ್ದ. ಆತನ ಮಗನಿಗೆ ತೀವ್ರ ಕೆಮ್ಮು, ನೆಗಡಿ ಮತ್ತು ಜ್ವರ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ. ಈ ವೇಳೆ ವೈದ್ಯಾ ಧಿಕಾರಿಗಳು ಆತನ ತಪಾಸಣೆ ನಡೆಸಿದ್ದು, ಕೊರೊನಾ ವೈರಸ್ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ತಂದೆ ಮತ್ತು ಮಗನನ್ನು ವಿಶೇಷ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾರ್ವೇಯಿಂದ ಬಂದಿರುವ ಮತ್ತೂಬ್ಬ ವ್ಯಕ್ತಿಗೆ ಕೆಮ್ಮು, ಜ್ವರ ಬಂದಿದ್ದು, ತಪಾ ಸಣೆ ವೇಳೆ ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತವಾ ಗಿದೆ. ಮೂವರ ರಕ್ತ ಮತ್ತು ಕಫದ ಮಾದರಿಯನ್ನು ಬೆಂಗಳೂರು, ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ.