Advertisement
ಸೋಮವಾರ, ನಗರದ ಎಂಸಿಸಿ ಎ ಬ್ಲಾಕ್‌ನ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೇ ವರ್ಷದ ಸಂಸ್ಮರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಭಕ್ತ ಸಮಾವೇಶದಲ್ಲಿ ವಿವೇಕಾನಂದರು ಪರಿಚಯಿಸಿದ ಹಿಂದೂ ಧರ್ಮ ಕುರಿತು ಮಾತನಾಡಿದ ಅವರು, ಧರ್ಮಗಳು ವಿಶಾಲವಾದ ವ್ಯಾಪ್ತಿ ಹೊಂದಿದ್ದು ಭಗವಂತನ ಪ್ರತಿರೂಪಗಳಾಗಿವೆ. ಮನುಷ್ಯ ಆಧ್ಯಾತ್ಮಿಕತೆಅರ್ಥೈಸಿಕೊಂಡಾಗ ಮಾತ್ರ ಧರ್ಮದ, ಆಚರಣೆಗಳ ಬಗ್ಗೆ ಅರಿವು ಆಗಲು ಸಾಧ್ಯ ಎಂದರು.
ವಿವೇಕಾನಂದರು ಹೇಳಿದ್ದಾರೆ ಎಂದು ತಿಳಿಸಿದರು. ಯಾವುದೇ ಧರ್ಮದ ಆಚರಣೆಗಳನ್ನು ತಿರಸ್ಕಾರ ಭಾವನೆಯಿದ ಕಾಣುವುದು ಸರಿಯಲ್ಲ. ಎಲ್ಲಾ ಧರ್ಮಗಳು ಬೇರೆ ಬೇರೆ ಯಾತ್ರೆಗಳಂತೆ. ಹಾಗಾಗಿ ಎಲ್ಲವನ್ನು ವಿವೇಕಶಾಲಿಯಾದ ಮನುಷ್ಯ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಹಿಂದೂ ಧರ್ಮ ಎಲ್ಲವನ್ನೂ ಒಗಟ್ಟಿನಿಂದಲೇ ಕಾಣುತ್ತಾ ಬಂದಿದೆ. ಅದು ಯಾರನ್ನು, ಯಾವ ಧರ್ಮವನ್ನು ತಿರಸ್ಕಾರ ಭಾವನೆಯಿಂದ ಕಂಡಿಲ್ಲ ಎಂದರಲ್ಲದೇ, ಪುಸ್ತಕದ ವಿಚಾರ, ತತ್ವದ ಮೇಲೆ ಹಿಂದೂ ಧರ್ಮ ನಿಂತಿಲ್ಲ. ಬದಲಾಗಿ ಅನುಭೂತಿ ಮೇಲೆ ನಿಂತಿದೆ. ವಿಶ್ವಧರ್ಮ ಅಂದರೆ ಅದಕ್ಕೆ ಯಾವುದೇ ದೇಶ, ಕಾಲ, ಮತ, ಪಂಥಗಳ ಮಿತಿಯಿಲ್ಲ. ಅಲ್ಲಿ ನಿಂದನೆ, ಅಸಹನೆಗೆ ಅವಕಾಶವಿಲ್ಲ. ತಮ್ಮ ವಿಚಾರಗಳನ್ನು ಒಪ್ಪದವರಿಗೆ ಯಾವುದೇ ರೀತಿ ಹಿಂಸೆ ನೀಡುವುದಿಲ್ಲ ಎಂದು ಹೇಳಿದರು.
Related Articles
Advertisement
ವಿವೇಕಾನಂದರ ವ್ಯಕ್ತಿ ಚಿತ್ರ ಕುರಿತು ತಿಳಿಸಿದ ಶಾಸ್ತ್ರೀಹಳ್ಳಿ ಸತ್ಯಸಾಯಿ ವಿದ್ಯಾನಿಕೇತನದ ಮುಖ್ಯೋಪಾಧ್ಯಾಯ ಜಗನ್ನಾಥ್ ನಾಡಿಗೇರ್, ವ್ಯಕ್ತಿ, ಕಟ್ಟಡ, ಸಂಸ್ಥೆಗಳಿಗೆ ನೂರಾರು ವರ್ಷಗಳ ಆಚರಣೆ ಇರುವುದು ಸಹಜ. ಆದರೆ ಸ್ವಾಮಿ ವಿವೇಕಾನಂದರಚಿಕಾಗೋ ಉಪನ್ಯಾಸಗಳಿಗೆ 125ನೇ ವರ್ಷದ ಆಚರಣೆ ಜಗತ್ತಿನ ಇತಿಹಾಸದಲ್ಲಿ ಇದೇ ಮೊದಲು. ಏಕೆಂದರೆ ಆ ಭಾಷಣಕ್ಕೆ ಅಂತಹ ಸತ್ವ, ವ್ಯಕ್ತಿಗೆ ಮಹತ್ವ , ಅಪಾರವಾದ ಪಾಂಡಿತ್ಯ ಇತ್ತು ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದರು. ವಿವೇಕಾನಂದ ಅವರು ದೇಶ ಕಂಡ ಶ್ರೇಷ್ಠ ಮಾನವತಾವಾದಿ, ದೇಶಪ್ರೇಮಿ. ಅವರಲ್ಲಿದ್ದ ಸಮಾಜಮುಖೀ ಗುಣಗಳೇ ಅವರನ್ನು ವಿಶ್ವವಿಜೇತರನ್ನಾಗಿ ಮಾಡಿತು. ಭಾರತದಲ್ಲಿ ಅಂದಿನ ಕಾಲಕ್ಕೆ ದಲಿತರ ಪ್ರಗತಿ ಬಗ್ಗೆ ಚಿಂತಿಸಿದವರು. ಸೀ¤Å ಶಿಕ್ಷಣಕ್ಕೆ ಮಹತ್ವ ಕೊಟ್ಟವರು ಅವರು. ಜಾತಿ, ಭೇದ, ಭಾವನೆಗಳನ್ನು ಬಿಟ್ಟು ರಾಮಕೃಷ್ಣ ಆಶ್ರಮ ಸಂಘಟನೆ ಸ್ಥಾಪಿಸಿದವರು. ಅವರ ಹೃದಯವಂತಿಕೆ, ಸರಳತೆ, ಮಾನವೀಯತೆ ನಾಡಿನ ಪ್ರತಿಯೊಬ್ಬರಿಗೂ ಮಾದರಿ ಎಂದು ಹೇಳಿದರು. ಚಿಕಾಗೋದಲ್ಲಿ ವಿಶ್ವಧರ್ಮ ಕಲ್ಪನೆಯ ಉಗಮ ಕುರಿತು ಕೊಲ್ಕತ್ತಾ ಅದ್ವೈತ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಉಪನ್ಯಾಸ ನೀಡಿದರು. ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಸ್ವಾಮಿ ನಿತ್ಯಸ್ಥಾನಂದ, ತ್ಯಾಗೀಶ್ವರನಂದ ಸ್ವಾಮೀಜಿ,
ರಾಧಕೃಷ್ಣ ಗುಪ್ತ ಮತ್ತಿತರರು ಇದ್ದರು.