Advertisement

ಒಡಿಶಾದ ಪುರಿ ಜಗನ್ನಾಥ ಉತ್ಖನನ ತಡೆಗೆ ಸುಪ್ರೀಂ ಕೋರ್ಟ್ ನಕಾರ

08:25 PM Jun 03, 2022 | Team Udayavani |

ನವದೆಹಲಿ: ಒಡಿಶಾದ ಪುರಿ ಜಗನ್ನಾಥ ಮಂದಿರದ ಸುತ್ತ ನಡೆಯುತ್ತಿರುವ ಉತVನನವನ್ನು ನಿಲ್ಲಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.

Advertisement

ಉತ್ಖನನ ಸಾರ್ವಜನಿಕ ಹಿತಾಸಕ್ತಿಯಿಂದಲೇ ನಡೆಯುತ್ತಿದೆ. ಆದರೆ ಈ ಅರ್ಜಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ, ಬೇಜವಾಬ್ದಾರಿಯಿಂದ ಕೂಡಿದೆ ಎಂದು ನ್ಯಾಯಪೀಠ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ:ಮಂಡ್ಯದ ವಿಶೇಷ ಚೇತನ ಯುವಕನಿಗೆ ಪ್ರಧಾನಿ ಕಚೇರಿಯಿಂದ ಆಧಾರ್ ಕಾರ್ಡ್

ಇತ್ತೀಚೆಗೆ ಪಿಐಎಲ್‌ಗ‌ಳನ್ನು ಬೇಕಾಬಿಟ್ಟಿ ಸಲ್ಲಿಸಲಾಗುತ್ತಿದೆ. ಇಂತಹ ಅರ್ಜಿಗಳ ಬಗ್ಗೆ ನಮಗೆ ತಿರಸ್ಕಾರವಿದೆ. ಇದರಿಂದ ನ್ಯಾಯಾಂಗದ ಕಾಲಹರಣವಾಗುತ್ತಿದೆ. ಇಂತಹವನ್ನೆಲ್ಲ ಆರಂಭದಲ್ಲಿ ಚಿವುಟಬೇಕು, ಅಭಿವೃದ್ಧಿ ಕೆಲಸ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next