ಮಾನ್ವಿ: ಪಟ್ಟಣದಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಜಗನ್ನಾಥ ದಾಸರ ದೇವಸ್ಥಾನಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಣ ಮೂರ್ತಿಯವರು ಪ್ರಥಮಬಾರಿಗೆ ಭೇಟಿ ನೀಡಿ ಶ್ರೀ ಜಗನ್ನಾಥ ದಾಸರ ಕಂಬ ಸ್ಥಂಬದ ದರ್ಶನ ಮಾಡಿಕೊಂಡರು.
Advertisement
ಶ್ರೀ ಮಠದ ವ್ಯವಸ್ಥಾಪಕ ಪಂ.ದ್ವಾರಕನಾಥ ಆಚಾರ್ಯ ಶ್ರೀ ಜಗನ್ನಾಥ ದಾಸರ ಜೀವನ ಹಾಗೂ ಅವರ ಕೃತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ದೇವಸ್ಥಾನದ ಅರ್ಚಕರಾದ ರವಿ ಅಚಾರ್ಯ, ರಾಘವೇಂದ್ರ ಆಚಾರ್ಯ,ಹಾಗೂ ಶ್ರೀನಿವಾಸರಾವ್ ಕೊರ್ಲಹಳ್ಳಿ, ಭೀಮಸೇನರಾವ್, ಕೃಷ್ಣಮೂರ್ತಿಗುಡಿ ಸೇರಿದಂತೆ ಇನ್ನಿತರರು ಇದ್ದರು.