Advertisement

Lord Jagannath: ಭಗವಾನ್‌ ಜಗನ್ನಾಥನ ಕೃಪೆಯಿಂದ ಟ್ರಂಪ್‌ ಜೀವ ಉಳಿಯಿತು: ಇಸ್ಕಾನ್!

10:38 AM Jul 15, 2024 | Team Udayavani |

ವಾಷಿಂಗ್ಟನ್:‌ ಭಗವಾನ್‌ ಜಗನ್ನಾಥನ ಕೃಪೆಯಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (78ವರ್ಷ) ಸಣ್ಣ, ಪುಟ್ಟ ಗಾಯದೊಂದಿಗೆ ಗುಂಡಿನ ದಾಳಿಯಿಂದ ಬದುಕುಳಿದಿದ್ದಾರೆ ಎಂದು ಇಸ್ಕಾನ್‌ ಹೇಳಿದೆ.‌

Advertisement

48 ವರ್ಷಗಳ ಹಿಂದೆ ನ್ಯೂಯಾರ್ಕ್‌ ನಲ್ಲಿ ನಡೆದ ಭಗವಾನ್‌ ಜಗನ್ನಾಥನ ಮೊದಲ ರಥಯಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಡೊನಾಲ್ಡ್‌ ಟ್ರಂಪ್‌ ನೆರವು ನೀಡಿದ್ದರು. ಟ್ರಂಪ್‌ ನೀಡಿರುವ ಸೇವೆಗಾಗಿ ಜಗನ್ನಾಥ್‌ ದೇವರು ಅವರ ಪ್ರಾಣವನ್ನು ರಕ್ಷಿಸಿರುವುದಾಗಿ ಇಸ್ಕಾನ್‌ (ISKCON) ವಕ್ತಾರ ತಿಳಿಸಿರುವುದಾಗಿ ವರದಿಯಾಗಿದೆ.

ಹೌದು, ನಿಜವಾಗಿಯೂ ಇದೊಂದು ಅಲೌಕಿಕವಾದ ಘಟನೆಯಾಗಿದೆ. ಬರೋಬ್ಬರಿ 48 ವರ್ಷಗಳ ಹಿಂದೆ ಡೊನಾಲ್ಡ್‌ ಟ್ರಂಪ್‌ ಅವರು ಜಗನ್ನಾಥ ರಥಯಾತ್ರೆ ಉತ್ಸವವನ್ನು ಉಳಿಸಿದ್ದರು. ಇದೀಗ ಪ್ರಪಂಚದಾದ್ಯಂತ ಜಗನ್ನಾಥ ರಥಯಾತ್ರೆಯ ಸಂಭ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಟ್ರಂಪ್‌ ಮೇಲೆ ದಾಳಿಯಾಗಿದ್ದು, ಭಗವಾನ್‌ ಜಗನ್ನಾಥ್‌ ಅವರ ಪ್ರಾಣವನ್ನು ರಕ್ಷಿಸುವ ಮೂಲಕ ಋಣ ಸಂದಾಯ ಮಾಡಿರುವುದಾಗಿ ಇಸ್ಕಾನ್‌ ವಕ್ತಾರ ರಾಧಾರಮಣ ದಾಸ್‌ ತಿಳಿಸಿದ್ದಾರೆ.

Advertisement

ಇಸ್ಕಾನ್‌ (ಹರೇ ಕೃಷ್ಣ ಪಂಥ) ದೇಶ, ವಿದೇಶಗಳಲ್ಲಿ ಶಾಖೆ ಹೊಂದಿದ್ದು, ಅಪಾರ ಪ್ರಮಾಣದ ಭಕ್ತ ವರ್ಗವನ್ನು ಹೊಂದಿದೆ. 1976ರ ಜುಲೈನಲ್ಲಿ ಇಸ್ಕಾನ್‌ ಭಕ್ತರು ಜಗನ್ನಾಥ ರಥಯಾತ್ರೆಯನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ರಥ ನಿರ್ಮಾಣಕ್ಕಾಗಿ ಟ್ರಂಪ್‌ ಅವರು ತಮ್ಮ ಟ್ರೈನ್‌ ಯಾರ್ಡ್‌ ಸ್ಥಳವನ್ನು ಉಚಿತವಾಗಿ ನೀಡಿದ್ದರು. ಇಂದು ಜಗತ್ತಿನಾದ್ಯಂತ 9 ದಿನಗಳ ಕಾಲ ಜಗನ್ನಾಥ ರಥಯಾತ್ರೆ ಸಂಭ್ರಮ ನಡೆಯುತ್ತಿರುವಾಗಲೇ ಟ್ರಂಪ್‌ ಅವರ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದರೂ, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಭಗವಾನ್‌ ಜಗನ್ನಾಥನೇ ಕಾರಣ ಎಂದು ದಾಸ್‌ ಎಕ್ಸ್‌ ನಲ್ಲಿ ನೀಡಿರುವ ಪ್ರಕಟನೆಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:Chitradurga: ಕಳವಾಗಿದ್ದ ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿ ಮಠದ ಆವರಣದಲ್ಲೇ ಪತ್ತೆ!

Advertisement

Udayavani is now on Telegram. Click here to join our channel and stay updated with the latest news.

Next