Advertisement

ಲಕ್ಸೆಂಬರ್ಗ್‌: ಸಾರ್ವಜನಿಕ ಸಾರಿಗೆ ಸಂಪೂರ್ಣ ಉಚಿತ!

06:00 AM Dec 08, 2018 | Team Udayavani |

ಲಕ್ಸೆಂಬರ್ಗ್‌ ಸಿಟಿ: ಯುರೋಪ್‌ನ ಚಿಕ್ಕ ದೇಶವಾದ ಲಕ್ಸೆಂಬರ್ಗ್‌, ತನ್ನಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನಾಗರಿಕರಿಗೆ ಉಚಿತವಾಗಿ ನೀಡುವುದಾಗಿ ಘೋಷಿಸಿದೆ. 2019ರ ಆರಂಭದಿಂದ ಇದು ಜಾರಿಗೆ ಬರಲಿದೆ. ಈ ಮೂಲಕ, ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಚಿತವಾಗಿಸಿದ ವಿಶ್ವದ ಮೊಟ್ಟ ಮೊದಲ ದೇಶವೆಂಬ ಹೆಗ್ಗಳಿಕೆ ಲಕ್ಸೆಂಬರ್ಗ್‌  ಪಾಲಾಗಿದೆ.  ಬೆಂಗಳೂರಿಗಿಂತ ಸುಮಾರು ಮೂರು ಪಟ್ಟು ದೊಡ್ಡದಿರುವ ಈ ಪುಟಾಣಿ ದೇಶದಲ್ಲಿ ಸಾರಿಗೆ ದರ ಅಂಥಾ ದುಬಾರಿಯೇನಲ್ಲ. ರೈಲಿನ ಪ್ರಥಮ ದರ್ಜೆ ಎ.ಸಿ. ಕೋಚ್‌ನ ಪ್ರಯಾಣದ ದರ ಗರಿಷ್ಠ 3 ಯೂರೋ (ಅಂದಾಜು 243 ರೂ.) ಇದೆ. ಹಾಗಿದ್ದರೂ, ಸಾರ್ವಜನಿಕ ಸಾರಿಗೆ ಬಳಸುವಂತೆ ಸಾರ್ವಜನಿಕರನ್ನು ಉತ್ತೇಜಿಸಿ ಆ ಮೂಲಕ ಪರಿಸರ ಸಂರಕ್ಷಣೆ ಮಾಡಲು ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಲ್ಲಿನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next