Advertisement

ಸರ್ಕಾರಿ ಬಂಗಲೆಗಳನ್ನು ಕೂಡಲೇ ಬಿಡಿ; ರಾಜಕೀಯ ಪಕ್ಷಗಳಿಗೆ ಕೇಂದ್ರ ಕಟ್ಟುನಿಟ್ಟಿನ ಆದೇಶ

08:23 PM Jun 04, 2022 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಲ್ಯೂಟೆನ್ಸ್‌ ಪ್ರದೇಶದಲ್ಲಿರುವ ಬಂಗಲೆಗಳಲ್ಲಿ ಠಿಕಾಣಿ ಹೂಡಿರುವ ರಾಜಕೀಯ ಪಕ್ಷಗಳು ಅಲ್ಲಿಂದ ಕಾಲೆ¤ಗೆಯಲೇಬೇಕಾಗಿದೆ. ಹೀಗೆಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

Advertisement

ನವದೆಹಲಿಯ ದೀನ್‌ ದಯಾಳ್‌ ಉಪಾಧ್ಯಾಯ ರಸ್ತೆಯಲ್ಲಿ ಅತ್ಯಾಧುನಿಕವಾಗಿರುವ ಕೇಂದ್ರ ಕಚೇರಿಯನ್ನು ಬಿಜೆಪಿ ಹೊಂದಿದ್ದರೂ, ಸರ್ಕಾರಿ ಬಂಗಲೆಗಳಲ್ಲಿ ಬಿಜೆಪಿ ವಾಸ್ತವ್ಯ ಹೂಡಿರುವುದನ್ನು ಮುಂದುವರಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ನಗರ ವ್ಯವಹಾರಗಳು ಮತ್ತು ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ, “ವೈಯಕ್ತಿಕವಾಗಿ ಒಬ್ಬರನ್ನು ಸರ್ಕಾರಿ ಬಂಗಲೆಗಳಿಂದ ತೆರವುಗೊಳಿಸುವುದು ಕಷ್ಟ. ಈಗ ನಾವು ಕೆಲವರನ್ನು ಮಾತ್ರ ಗುರಿಯಾಗಿಸಿಕೊಂಡು ತೆರವುಗೊಳಿಸುತ್ತಿಲ್ಲ ಎಂಬ ಟೀಕೆಯನ್ನು ಇನ್ನು ಮಾಡಲಾರರು ಎಂದು ತಿಳಿದು ಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

ಸರ್ಕಾರಿ ಬಂಗಲೆಗಳಿಂದ ರಾಜಕೀಯ ಪಕ್ಷಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಏಕೆಂದರೆ, ಎಲ್ಲಾ ರಾಜಕೀಯ ಪಕ್ಷಗಳಿಗೂ ಕಚೇರಿ ನಿರ್ಮಿಸಲು ಜಮೀನು ನೀಡಲಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರದಿಂದ ಜಮೀನು ಪಡೆದ ಮೂರು ವರ್ಷಗಳ ಒಳಗಾಗಿ ರಾಜಕೀಯ ಪಕ್ಷಗಳು ಸ್ವಂತ ಕಚೇರಿ ನಿರ್ಮಿಸಿ, ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸಬೇಕು ಎನ್ನುವುದು ಕರಾರು.

Advertisement

Udayavani is now on Telegram. Click here to join our channel and stay updated with the latest news.

Next