Advertisement
ಕೊರೊನಾ ಸೋಂಕಿನಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ದೇಶದ ಅರ್ಥ ವ್ಯವಸ್ಥೆಗೆ ಇದೊಂದು ಚೇತೋಹಾರಿ ಸುದ್ದಿಯೂ ಆಗಿದೆ.
Related Articles
ಭಾರತೀಯ ಆರ್ಥಿಕತೆಯು ನಿರೀಕ್ಷೆಗಿಂತಲೂ ಬೇಗನೇ ಚೇತರಿಸಿಕೊಳ್ಳುತ್ತಿರುವುದು ಗೋಚರಿಸುತ್ತಿದೆ ಎಂದು ಜಾಗತಿಕ ವಿತ್ತ ಅಧ್ಯಯನ ಸಂಸ್ಥೆ ಆಕ್ಸ್‌ಫರ್ಡ್ ಎಕಾನಾಮಿಕ್ಸ್ ಹೇಳಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷದ ನಾಲ್ಕನೈ ತ್ತೈಮಾಸಿಕದಲ್ಲಿ ಹಣದುಬ್ಬರವು ಸರಾಸರಿ 6 ಪ್ರತಿಶತಕ್ಕಿಂತ ಅಧಿಕವಿರಬಹುದು ಮತ್ತು ಡಿಸೆಂಬರ್‌ನಲ್ಲಿ ಆರ್‌ಬಿಐ ಪಾಲಿಸಿ ದರಗಳ ವಿಚಾರದಲ್ಲಿ ಪರಿಶೀಲನಾ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಈ ಸಂಸ್ಥೆ ಹೇಳಿದೆ.
Advertisement
ಅಕ್ಟೋಬರ್ ತಿಂಗಳಲ್ಲಿನ ಗ್ರಾಹಕ ಹಣದುಬ್ಬರವು ವೈರಸ್ ಪೂರ್ವ ಅವಧಿಗೆ ಸಮನಾಗಿದೆ. ಇಂಧನ ಹೊರತುಪಡಿಸಿ, ಪ್ರತಿಯೊಂದು ವಿಶಾಲ ವರ್ಗವೂ ಬೆಲೆ ಏರಿಕೆಯನ್ನು ಎದುರಿಸುತ್ತಿವೆ. ಆದರೆ ಇದೇ ವೇಳೆಯಲ್ಲೇ ಬೇರುಮಟ್ಟದ ಆರ್ಥಿಕ ಚಟುವಟಿಕೆಗಳ ದತ್ತಾಂಶಗಳನ್ನು ಗಮನಿಸಿದಾಗ, ಆರ್ಥಿಕತೆಯು ನಾವು ನಿರೀಕ್ಷಿಸಿದ್ದಕ್ಕಿಂತಲೂ ವೇಗವಾಗಿ ಚೇತರಿಸಿಕೊಳ್ಳುತ್ತಿರುವುದು ತಿಳಿಯುತ್ತಿದೆ ಎನ್ನುತ್ತದೆ ಈ ವರದಿ.
ವಿಮಾನಯಾನಕ್ಕೆ ಬಲ ತುಂಬಿದ ದೀಪಾವಳಿಕೋವಿಡ್ ಸಾಂಕ್ರಾಮಿಕದಿಂದಾಗಿ ನೆಲಕಚ್ಚಿರುವ ವಿಮಾನಯಾನ ಕ್ಷೇತ್ರ ಸಾಲು-ಸಾಲು ಹಬ್ಬಗಳಿಂದಾಗಿ ಚೇತರಿಸಿಕೊಳ್ಳಲಾರಂಭಿಸಿದೆ. ಅದರಲ್ಲೂ ದೀಪಾವಳಿ ಸಮಯದಲ್ಲಿ ದೇಶೀಯ ವಿಮಾನಯಾನದಲ್ಲಿ ಪ್ರಯಾಣಿಕರ ಸಂಖ್ಯೆ ಹಠಾತ್ ಹೆಚ್ಚಳ ಕಂಡಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹದೀìಪ್ ಸಿಂಗ್ ಪುರಿ, “”ದೀಪಾವಳಿಯ ಸಂಭ್ರಮದ ಸಮಯದಲ್ಲಿ, ದೇಶೀಯ ವಿಮಾನಯಾನ ಕ್ಷೇತ್ರ ಹೊಸ ಎತ್ತರವನ್ನು ತಲುಪಿದೆ. 1,903 ವಿಮಾನಗಳಲ್ಲಿ 2.25 ಲಕ್ಷ ಪ್ಯಾಸೆಂಜರ್‌ಗಳು ಪ್ರಯಾಣ ಮಾಡಿದ್ದಾರೆ” ಎಂದಿದ್ದಾರೆ. ದೀಪಾವಳಿಯ ಮುನ್ನಾ ದಿನ ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ 70 ಪ್ರತಿಶತದಷ್ಟಿತ್ತು. ದಸರಾಗಿಂತಲೂ ದೀಪಾವಳಿ ಸಮಯದಲ್ಲಿ ಸಂಚಾರ ಹೆಚ್ಚಾಗಿದೆ ಎಂದು ವಿಮಾನಯಾನ ಸಂಸ್ಥೆಯೊಂದರ ಅಧಿಕಾರಿ ಹೇಳಿದ್ದಾರೆ.