Advertisement

ವಿಶ್ವಸಂಸ್ಥೆಯಲ್ಲಿ ಪ್ರಿಯಾಂಕಾ ಮಾತು

06:31 PM Sep 20, 2022 | Team Udayavani |

ನ್ಯೂಯಾರ್ಕ್‌: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ, ಭಾಷಣ ಮಾಡಿದ್ದಾರೆ.

Advertisement

2016ರಿಂದ ವಿಶ್ವಸಂಸ್ಥೆಯ “ಸದ್ಭಾವನಾ’ ರಾಯಭಾರಿಯಾಗಿರುವ ಅವರು ಅಲ್ಲಿ ಹವಾಮಾನ ವೈಪರೀತ್ಯ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ಸಭೆಯಲ್ಲಿ ನೊಬೆಲ್‌ ಶಾಂತಿ ಪುರಸ್ಕೃತೆ ಮಲಾಲಾ ಯೂಸುಫ್ಝೈ, ಅಮೆರಿಕದ ಕವಯಿತ್ರಿ ಅಮಾಂಡಾ ಗೊರ್ಮಾನ್‌ ಸೇರಿ ಅನೇಕ ಪ್ರಮುಖರು ಭಾಗವಹಿಸಿದ್ದರು.

ಪ್ರಿಯಾಂಕಾ ಅವರು ಮಲಾಲಾ ಮತ್ತು ಅಮಾಂಡಾ ಅವರೊಂದಿಗಿರುವ ಫೋಟೋವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಗೆ ಮೀಸಲಿರಿಸಿದ್ದ ಆಸನದ ವಿಡಿಯೋವನ್ನೂ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next