Advertisement

Hindu Rashtra; ಭಾರತೀಯರೆಲ್ಲರೂ ಹಿಂದೂಗಳು: ಮೋಹನ್‌ ಭಾಗವತ್‌

09:55 PM Sep 01, 2023 | Team Udayavani |

ನವದೆಹಲಿ: ಭಾರತ ಹಿಂದೂ ರಾಷ್ಟ್ರವಾಗಿದ್ದು, ಭಾರತದಲ್ಲಿರುವವರೆಲ್ಲರೂ ಹಿಂದೂಗಳೇ ಆಗಿದ್ದಾರೆ ಹಾಗೂ ಹಿಂದೂ ಎಂಬುದು ಎಲ್ಲ ಭಾರತೀಯರನ್ನು ಪ್ರತಿನಿಧಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ನ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ತರುಣ ಭಾರತ ಪತ್ರಿಕೆಯ ಪ್ರಕಾಶನ ಸಂಸ್ಥೆ ಶ್ರೀನರಕೇಸರಿ ಪ್ರಕಾಶನ ಲಿಮಿಟೆಡ್‌ನ‌ ನೂತನ ಕಟ್ಟಡ ಮಧುಕರ ಭವನವನ್ನು ಭಾಗವತ್‌ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ವರದಿಗಾರಿಕೆ ಎನ್ನುವುದು ಎಲ್ಲರನ್ನೂ ಒಳಗೊಳ್ಳುವ ಸಿದ್ಧಾಂತಗಳನ್ನು ಮರೆಯದೆಯೂ ಸತ್ಯಪರವಾಗಿ ನ್ಯಾಯಯುತವಾಗಿ ಇರಬೇಕು ಎಂದಿದ್ದಾರೆ. ಇದೇ ವೇಳೆ ಸಿದ್ಧಾಂತಗಳ ಪ್ರಕಾರ ಹಿಂದೂಸ್ತಾನ ಹಿಂದೂ ರಾಷ್ಟ್ರವಾಗಿದ್ದು, ಇಲ್ಲಿರುವವರೆಲ್ಲರೂ ಹಿಂದೂಗಳೇ ಆಗಿದ್ದಾರೆ. ಹಿಂದೂಗಳು ಎಂದರೆ ಅದು ಸಂಪೂರ್ಣ ಭಾರತೀಯರು. ಇಲ್ಲಿರುವ ಎಲ್ಲರೂ ಹಿಂದೂ ಸಂಸ್ಕೃತಿಗೆ ಸೇರಿದವರು, ಅವರ ಪೂರ್ವಜರು ಕೂಡ ಹಿಂದೂಗಳೇ ಅದನ್ನು ಹೊರತು ಪಡಿಸಿ ಬೇರೇನೂ ಇಲ್ಲ. ಇದನ್ನು ಕೆಲವರು ಅರ್ಥ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಅರ್ಥವಾದರೂ ತಮ್ಮ ಸ್ವಾರ್ಥದಿಂದ ಒಪ್ಪುತ್ತಿಲ್ಲ ಮತ್ತೂ ಕೆಲವರಿಗೆ ಅರ್ಥವಾಗಿಲ್ಲ, ಹಲವರು ಮರೆತು ಬಿಟ್ಟಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next