Advertisement
ನಗರದ ಲಿಂಗಾಯತ ಭವನದಲ್ಲಿ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ “ಶರಣರ ವಚನಗಳಲ್ಲಿ ಮೂಢನಂಬಿಕೆಯ ವಿರೋಧ’ ವಿಷಯ ಕುರಿತು ಮಾತನಾಡಿದರು.
Related Articles
Advertisement
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ| ಹನುಮಂತಪ್ಪ ಸಂಜೀವನ್ನವರ ಮಾತನಾಡಿ, ಶರಣರು ಸದಾಚಾರ ಸಂಪನ್ನತೆಯಿಂದ ವಿಜೃಂಭಿಸುವ ಸಮಾಜ ನಿರ್ಮಿತಿಗೆ ಶ್ರಮಿಸಿದ ಮಹಾಮಾನವತಾವಾದಿಗಳು. ಬಹಿರಂಗದ ವ್ಯವಹಾರ ಸಾರಾಸಗಟಾಗಿ ಅಲ್ಲಗಳೆದು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದರು. ಮೂಢನಂಬಿಕೆಗಳ ಅರ್ಥಹೀನತೆ, ಅಪಾಯ ಮನಗಂಡಿದ್ದ ಅವರು ಜನರು ಅಂತಹ ಅಂಧಾನುಕರಣೆ ಕೈಬಿಡುವಂತೆ ಕರೆ ನೀಡಿದ್ದರು ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿನಿ ಮಹೇಶ್ವರಿ ತೇಗೂರ ಮಾತನಾಡಿದರು. ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಆಶೀರ್ವಚನ ನೀಡಿ, ನಮ್ಮ ಜೀವನ ಬೆಳಗಿಸಿಕೊಳ್ಳಲು ಶರಣರು ಹಲವು ಮೌಲ್ಯಗಳೆಂಬ ದೀಪಗಳನ್ನು ವಚನಮುಖೇನ ದಯಪಾಲಿಸಿದ್ದಾರೆ. ಅವುಗಳಲ್ಲಿ ವೈಚಾರಿಕತೆಯೂ ಒಂದು. ಮಾಡುವ ಮಾಟದ ಸತ್ಯಾಸತ್ಯತೆ ಪರಿಶೀಲಿಸಿ ಮುನ್ನಡೆಯುವವನು ಎಡವಲಾರ. ಅಂಧಶ್ರದ್ಧೆಯಿಂದ ದೂರವಿರಲು ಶ್ರಮಿಸಿದವನು ಜೀವನದಲ್ಲಿ ಸುಖೀಯಾಗಿರುತ್ತಾನೆ ಎಂದರು.
ಅಖೀಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ಶರಣೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶುಭಾ ಎಸ್. ತೆಲಸಂಗ ವಚನ ವಿಶ್ಲೇಷಣೆ ಮಾಡಿದರು. ಆಶಾ ಯಮಕನಮರಡಿ ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ಎಂ.ವೈ. ಮೆಣಸಿನಕಾಯಿ ವಂದಿಸಿದರು. ಚನ್ನಬಸಪ್ಪ ಚೊಣ್ಣದ ಇದ್ದರು.