Advertisement

ಮಂದಿರ ನಿರ್ಮಾಣಕ್ಕೆ ಸರ್ವರೂ ಕೈಜೋಡಿಸಿ: ಪೇಜಾವರ ಶ್ರೀ

07:17 AM Dec 05, 2020 | mahesh |

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಸುಯೋಗದಲ್ಲಿ ಎಲ್ಲ ಬಂಧುಗಳು ತಮ್ಮ ಶಕ್ತಿ ಸಾಮರ್ಥ್ಯದ ಅನುಸಾರ ಸ್ಪಂದಿಸುವ ಮೂಲಕ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವಿಶ್ವಸ್ಥ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.

Advertisement

ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ ಅಂಗವಾಗಿ ಮಂಗಳೂರಿನ ಕದ್ರಿ ಯಲ್ಲಿರುವ ವಿಶ್ವಹಿಂದೂ ಪರಿಷತ್‌ ಕಾರ್ಯಾಲಯ “ವಿಶ್ವಶ್ರೀ’ಯಲ್ಲಿ ನಿಧಿ ಸಮರ್ಪಣೆಯ ಮಂಗಳೂರು ಕಾರ್ಯಾ ಲಯವನ್ನು ಶುಕ್ರವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಸುಪ್ರೀಂ ಕೋರ್ಟ್‌ ಆದೇಶದ ಕಾರಣ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್‌ ರಚನೆ ಗೊಂಡಿದೆ. ಯಾರೋ ಒಬ್ಬರ ದೇಣಿಗೆಯಿಂದ ರಾಮಮಂದಿರ ನಿರ್ಮಾಣ ವಾಗಬಾರದು. ಬದಲಾಗಿ ಎಲ್ಲ ರಾಮಭಕ್ತರ ದೇಣಿಗೆಯೂ ಸೇರ ಬೇಕೆಂಬ ಮಹದಾಸೆಯಿಂದ ನಿಧಿ ಸಮರ್ಪಣೆಗೆ ನಿರ್ಧರಿಸಲಾಗಿದೆ. ರಾಮಾಯಣ ದಲ್ಲಿ ಸೇತುವೆ ನಿರ್ಮಾಣಕ್ಕೆ ಅಳಿಲು ಕೂಡ ತನ್ನ ಸೇವೆ ಸಲ್ಲಿಸಿದಂತೆ ಇದೀಗ ಮಂದಿರ ನಿರ್ಮಾಣಕ್ಕೆ ಸರ್ವರೂ ಅಳಿಲ ಸೇವೆ ಮಾಡುವಂತೆ ಸ್ವಾಮೀಜಿ ಕರೆ ನೀಡಿದರು.

ಕರಾವಳಿ ಭಾಗದಲ್ಲಿ ಜೀರ್ಣಾ ವಸ್ಥೆಯಲ್ಲಿದ್ದ ಅದೆಷ್ಟೋ ದೇವಸ್ಥಾನ ಗಳನ್ನು ಪುನರುಜ್ಜೀವನ ಗೊಳಿಸಿ ಭವ್ಯ ವಾಗಿ ರೂಪಿಸಿರುವುದು ನಮ್ಮೆಲ್ಲರಿಗೂ ತಿಳಿದಿದೆ. ಇದೇ ಮಾದರಿ ಯಲ್ಲಿ ಅಯೋಧ್ಯೆಯ ಮಂದಿರ ನಿರ್ಮಾಣಕ್ಕೂ ಕರಾವಳಿ ಭಾಗದಿಂದ ಅವಿರತ ಶ್ರಮ ಸಾಕಾರವಾಗಲಿ ಎಂದರು. ವಿಶ್ವಹಿಂದೂ ಪರಿಷತ್‌ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ|ಎಂ.ಬಿ. ಪುರಾಣಿಕ್‌ ಮಾತನಾಡಿ, ಅಯೋಧ್ಯೆ ಯಲ್ಲಿ ಮಂದಿರ ನಿರ್ಮಾಣದ ಕಾಲ ಕೂಡಿಬಂದಿದೆ. ದೇಶದ ಪ್ರತಿ ರಾಮಭಕ್ತನ ಕಾಣಿಕೆ ಮಂದಿರ ನಿರ್ಮಾಣಕ್ಕೆ ಸಲ್ಲಿಕೆಯಾಗಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾಂತ ಸಹ ಸಂಘಚಾಲಕ ಡಾ| ವಾಮನ ಶೆಣೈ, ವಿಭಾಗ ಸಂಘಚಾಲಕ ಗೋಪಾಲ ಚೆಟ್ಟಿಯಾರ್‌, ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಶಾಸಕರಾದ ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜಾ, ಕುಟುಂಬ ಪ್ರಬೋಧನ ಅಖೀಲ ಭಾರತ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್‌, ಆರ್‌ಎಸ್‌ಎಸ್‌ ಹಿರಿಯ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಪ್ರಮುಖರಾದ ಕೃಷ್ಣಮೂರ್ತಿ ಎಂ., ಪಿ.ಎಸ್‌. ಪ್ರಕಾಶ್‌, ಡಾ| ಸತೀಶ್‌ ರಾವ್‌, ಸುನೀಲ್‌ ಆಚಾರ್‌, ಗೋಪಾಲ ಕುತ್ತಾರ್‌, ಜಗದೀಶ ಶೇಣವ ಉಪಸ್ಥಿತರಿದ್ದರು.
ಶಿವಾನಂದ ಮೆಂಡನ್‌ ಸ್ವಾಗತಿಸಿದರು. ಕೃಷ್ಣ ಕಜೆ ವಂದಿಸಿದರು. ಸುರೇಖಾರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಜ.15ರಿಂದ ದೇಣಿಗೆ ಸಂಗ್ರಹ
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಜ.15ರಿಂದ ಫೆ.27ರ ವರೆಗೆ ದೇಶಾದ್ಯಂತ ದೇಣಿಗೆ ಸಂಗ್ರಹ ಕಾರ್ಯ ನಡೆಯಲಿದೆ. ರಾಮಭಕ್ತರು ತಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡುವ ಮೂಲಕ ಕೈಜೋಡಿಸಬೇಕು. ದೇಶದ ಮೂಲೆ ಮೂಲೆಯಲ್ಲಿ ಮನೆಮನೆಗೆ ತೆರಳಿ ಧನ ಸಂಗ್ರಹ ಕಾರ್ಯ ನಡೆಯಲಿದೆ. ಪ್ರತಿ ವ್ಯಕ್ತಿ ಕನಿಷ್ಠ 10 ರೂ., ಒಂದು ಮನೆಯಿಂದ 100 ರೂ. ನೀಡಬಹುದು; ಗರಿಷ್ಠ ಮೊತ್ತ ಅವರವರ ಶಕ್ತಿ -ಸಾಮರ್ಥ್ಯಕ್ಕೆ ಬಿಟ್ಟದ್ದು ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next