Advertisement

ICC chairman; ಮೂರನೇ ಅವಧಿ ಬೇಡ ಎಂದ ಬಾರ್ಕ್ಲೇ: ಎಲ್ಲರ ಚಿತ್ತ ಜಯ್ ಶಾ ರತ್ತ

01:42 PM Aug 21, 2024 | Team Udayavani |

ದುಬೈ: ಹಾಲಿ ಐಸಿಸಿ(ICC) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮೂರನೇ ಅವಧಿಗೆ ಮುಂದುವರಿಯುವುದರಿಂದ ಹಿಂದಕ್ಕೆ ಸರಿದಿದ್ದಾರೆ. ಈ ವಿದ್ಯಮಾನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ ಅಧ್ಯಕ್ಷರಾಗಲಿದ್ದಾರೆಯೇ ಎನ್ನುವ ಕುರಿತು ಊಹಾಪೋಹಗಳಿಗೆ ಉತ್ತೇಜನ ನೀಡಿದೆ.

Advertisement

ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಆಗಸ್ಟ್ 27 ರೊಳಗೆ ಶಾ(Jay Shah) ಅವರು ತಮ್ಮ ಉಮೇದುವಾರಿಕೆ ಸಲ್ಲಿಸಲು ಆಸಕ್ತಿ ಹೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಲಿದೆ. ಜಯ್ ಅವರು ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ.

ಐಸಿಸಿ ಅಧ್ಯಕ್ಷರಾದವರು ಎರಡು ವರ್ಷಗಳ ಮೂರು ಅವಧಿಗೆ ಕಾರ್ಯ ನಿರ್ವಹಿಸಲು ಅರ್ಹರಾಗಿರುತ್ತಾರೆ. ನ್ಯೂಜಿಲ್ಯಾಂಡ್ ಮೂಲದ ವಕೀಲ ಬಾರ್ಕ್ಲೇ (Greg Barclay) ನಾಲ್ಕು ವರ್ಷಗಳನ್ನು ಪೂರೈಸಿದ್ದಾರೆ.

‘ನವೆಂಬರ್ ಅಂತ್ಯದಲ್ಲಿ ಅಧಿಕಾರಾವಧಿ ಮುಗಿದಾಗ ಹುದ್ದೆಯಿಂದ ಕೆಳಗಿಳಿಯುತ್ತೇನೆ. ಮೂರನೇ ಅವಧಿಗೆ ನಿಲ್ಲುವುದಿಲ್ಲ’ ಎಂದು ಗ್ರೆಗ್ ಬಾರ್ಕ್ಲೇ ಅವರು ಈಗಾಗಲೇ ಮಂಡಳಿಗೆ ದೃಢಪಡಿಸಿದ್ದಾರೆ. ಬಾರ್ಕ್ಲೇ ಅವರು ನವೆಂಬರ್ 2020 ರಲ್ಲಿ ICC ಅಧ್ಯಕ್ಷರಾಗಿ ನೇಮಕವಾಗಿದ್ದರು. 2022 ರಲ್ಲಿ ಮರು ಆಯ್ಕೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next