Advertisement
ಡೀಸೆಲ್ ಆಟೋ ನೋಂದಣಿ ನಿಷೇಧಿಸಿರುವ ರಾಜ್ಯಸರ್ಕಾರದ ಕ್ರಮ ಪ್ರಶ್ನಿಸಿ ಆಟೋ ಮೊಬೈಲ್ಸ್ ಕಂಪೆನಿಗಳು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ. ಬಿ.ವಿ ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿತು.ವಿಚಾರಣೆ ವೇಳೆ “ಯಾವ ನಿರ್ದಿಷ್ಟ ಕಾರಣಕ್ಕಾಗಿ ಡೀಸೆಲ್ ಆಟೋ ನೋಂದಣಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿಲ್ಲ. ಬದಲಿಗೆ ವಾಯುಮಾಲಿನ್ಯ ತಡೆಗಟ್ಟಲು ಎಂದು ಈಗ ಕಾರಣ ನೀಡುತ್ತಿದ್ದೀರಿ’ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, “ಸರ್ಕಾರದ ಆದೇಶದಲ್ಲಿ ಈ ಬಗ್ಗೆ ಉಲ್ಲೇಖೀಸಿಲ್ಲ. ಜೊತೆಗೆ ಸದ್ಯ ಓಡಾಟ ನಡೆಸುತ್ತಿರುವ ಸಾವಿರಾರು ಸಂಖ್ಯೆಯ ಡಿಸೇಲ್ ಆಟೋ ರಿಕ್ಷಾಗಳ ಪರಿಸ್ಥಿತಿಯೇನು? ಇದಲ್ಲದೆ ಎಸ್‌ಯುವಿ ಸೇರಿ ಇನ್ನಿತರೆ ಡೀಸೆಲ್ ವಾಹನಗಳಿಗೆ ಯಾಕೆ ಅನ್ವಯವಾಗುವುದಿಲ್ಲ. ಪರಿಸರ ರಕ್ಷಣೆ ಹಾಗೂ ವಾಯುಮಾಲಿನ್ಯ ತಡೆಗಟ್ಟಲು ಎಲ್ಲಾ ಮಾದರಿ ಡೀಸೆಲ್ ವಾಹನಗಳ ಸಂಚಾರ ರದ್ದು ಮಾಡ ಬೇಕು, ಕೇವಲ ಆಯ್ದ ಕೆಲವೇ ವಾಹನಗಳಿಗೆ ಮಾತ್ರ ಏಕೆ ನಿಯಮ ರೂಪಿಸಬೇಕು’ ಎಂದು ಮೌಖೀಕ ಅಭಿಪ್ರಾಯ ವ್ಯಕ್ತಪಡಿಸಿತು.