Advertisement

ಮಾ.25ರಿಂದ 8 ದಿನ ಬ್ಯಾಂಕ್ ಗಳಿಗೆ ರಜೆ ಇಲ್ಲ; ಆರ್ ಬಿಐ ಸೂಚನೆ

03:51 PM Mar 25, 2017 | Sharanya Alva |

ನವದೆಹಲಿ: ಸರ್ಕಾರದ ಸ್ವೀಕೃತಿ ಹಾಗೂ ತೆರಿಗೆ ಸಂಗ್ರಹದ ವಹಿವಾಟಿನ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳು ಮಾ.25ರಿಂದ ಏಪ್ರಿಲ್ 1ರವರೆಗೆ ತೆರೆದಿರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ನೀಡಿದೆ. ಈ ಅವಧಿಯಲ್ಲಿ ಆರ್ ಬಿಐ ಕೂಡಾ ಕಾರ್ಯನಿರ್ವಹಿಸಲಿದೆ ಎಂದು ಹೇಳಿದೆ.

Advertisement

ಸರ್ಕಾರಿ ಸ್ವೀಕೃತಿ ಮತ್ತು ಪಾವತಿ ಸಂಗ್ರಹದ ವಹಿವಾಟಿನ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ 4ನೇ ಹಾಗೂ ಭಾನುವಾರ, ಎಲ್ಲಾ ರಜೆ ಸೇರಿದಂತೆ) ಮಾ.25ರಿಂದ ಏ.1ರವರೆಗೆ ಬ್ಯಾಂಕ್ ಗಳು ಕಾರ್ಯನಿರ್ವಹಿಸಬೇಕೆಂದು ಆರ್ ಬಿಐ ಶುಕ್ರವಾರ ಸಂಜೆ ವೆಬ್ ಸೈಟ್ ನಲ್ಲಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್ ಬಿಐ ಸೂಚನೆಯಂತೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳು ರಜಾ ದಿನಗಳು ಸೇರಿದಂತೆ ಏ.25ರಿಂದ ಏ.1ರವರೆಗೆ 8ದಿನಗಳ ಕಾಲ ಕಾರ್ಯನಿರ್ವಹಿಸಲಿದೆ.
 

Advertisement

Udayavani is now on Telegram. Click here to join our channel and stay updated with the latest news.

Next