ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ 19 ವೈರಸ್ ಗೆ ಸಂಬಂಧಿಸಿದಂತೆ ಸೋಂಕು ಹಾಗೂ ಸಾವಿನ ಕುರಿತು ನಡೆಸಿದ ಅಧ್ಯಯನದಲ್ಲಿ ಕೆಲವೊಂದು ಮಹತ್ವದ ಅಂಶಗಳು ಪತ್ತೆಯಾಗಿರುವುದಾಗಿ ನ್ಯೂಯಾರ್ಕ್ ನ ಮೌಂಟ್ ಸಿನಾಯ್ ಮಾರ್ನಿಂಗ್ ಸೈಡ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ವೈದ್ಯರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತರದಲ್ಲಿ ಗಂಡಸರೇ ಹೆಚ್ಚು ಅನಾರೋಗ್ಯಕ್ಕೆ ಒಳಗಾಗಿರುತ್ತಿದ್ದರು. ಸಾಮಾನ್ಯವಾಗಿ ಗಮನಿಸಿದಂತೆ ಆಸ್ಪತ್ರೆಗೆ ಆಗಲಿಸಿದ ರೋಗಿಗಳಲ್ಲಿ ಮಹಿಳೆಯರಿಗಿಂತ ಗಂಡಸರೇ ಹೆಚ್ಚು ಸಮಸ್ಯೆಗೆ ಗುರಿಯಾಗಿದ್ದರು. ಅಲ್ಲದೇ ಕೋವಿಡ್ 19 ಸೋಂಕು ಮಹಿಳೆಯರಿಗಿಂತ ಹೆಚ್ಚು ಪುರುಷರನ್ನೇ ಹೆಚ್ಚು ಬಲಿ ತೆಗೆದುಕೊಂಡಿದೆ ಎಂದು ಡಾ.ಜಾಕ್ಸನ್ ವಿವರಿಸಿದ್ದಾರೆ.
ಕೋವಿಡ್ 19 ಸೋಂಕು ಹೆಂಗಸರಿಗಿಂತ ಗಂಡಸರಿಗೆ ಹೆಚ್ಚು ಅಪಾಯಕಾರಿ ಎಂಬುದು ನಮ್ಮ ಅಧ್ಯಯನದಿಂದ ತಿಳಿದುಬಂದಿದೆ. ಈ ಸೋಂಕು ಮಹಿಳೆಯರಿಗಿಂತ ಹೆಚ್ಚು ಗಂಡಸರಿಗೆ ಹೆಚ್ಚು ಅಪಾಯ ತಂದೊಡ್ಡಿರುವುದು ಯಾಕೆ ಎಂಬ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.
13 ರಾಜ್ಯಗಳಲ್ಲಿ ಸಂಭವಿಸಿದ 3,600 ಸಾವು ಮತ್ತು ನ್ಯೂಯಾರ್ಕ್ ನಗರದಲ್ಲಿ ವರದಿಯಾದ ಸಾವಿನ ವರದಿ ಪ್ರಕಾರ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿರುವವರಲ್ಲಿ ಗಂಡಸರೇ ಪ್ರಮಾಣವೇ ಅಧಿಕ ಎಂದು ಸ್ಪಷ್ಟಪಡಿಸಿದೆ.
ಇದು ಜೀವವಿಜ್ಞಾನದ ಅಧ್ಯಯನದ ಪ್ರಕಾರ ಮಹಿಳೆಯರ ದೇಹ ಸೋಂಕಿನ ವಿರುದ್ಧ ಹೋರಾಡಲು ಹೆಚ್ಚು ಪ್ರಬಲವಾಗಿದೆ. ಮಹಿಳೆಯಲ್ಲಿನ ಹಾರ್ಮೋನ್ ಕೂಡಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಹೊಂದಿದೆ. ಅಲ್ಲದೇ 2 ಎಕ್ಸ್ ಕ್ರೋಮೋಸೋಮ್ಸ್ ಗಳು ಕೂಡಾ ಮಹಿಳೆಯರಿಗೆ ಸೋಂಕನ್ನು ತಡೆಯುವ ಶಕ್ತಿ ನೀಡಿದೆ ಎಂದು ವರದಿ ವಿವರಿಸಿದೆ.