Advertisement

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

03:37 PM Nov 14, 2024 | Team Udayavani |

ಹೊಸದಿಲ್ಲಿ: ನಾನಾ ರೀತಿಯ ಮೋಸ ಮಾಡುತ್ತಿರುವ ಸೈಬರ್‌ ವಂಚಕರು ಈಗ ಮದುವೆಗಳನ್ನು ಗುರಿಯಾಗಿ­ಸಿಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಮೂಲಕ ಮದುವೆ ಆಮಂತ್ರಣದ ಆ್ಯಪ್‌ ಕಳಿಸಿ, ಫೋನ್‌ನಲ್ಲಿರುವ ಮಾಹಿತಿ­ಯನ್ನು ಸಂಪೂರ್ಣವಾಗಿ ದೋಚುತ್ತಿದ್ದಾರೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Advertisement

ಒಮ್ಮೆ ಈ ಆ್ಯಪ್‌ ತೆರೆದರೆ ಅದು ಸ್ವಯಂಚಾಲಿತವಾಗಿ ಇನ್‌ಸ್ಟಾಲ್‌ ಆಗುತ್ತದೆ. ಬಳಿಕ ಅದರಲ್ಲಿ ಅಳವಡಿಸಿರುವ ಮಾಲ್ವೇರ್‌ ಮೊಬೈಲ್‌ ಮೇಲೆ ನಿಯಂತ್ರಣ ಸಾಧಿಸಿ, ಎಲ್ಲ ಮಾಹಿತಿಯನ್ನು ಹ್ಯಾಕರ್‌ಗೆ ರವಾನಿಸುತ್ತದೆ. ಇದನ್ನು ಬಳಸಿಕೊಂಡು ಹ್ಯಾಕರ್‌ಗಳು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next