Advertisement

ರಣ್ಬೀರ್- ಆಲಿಯಾ ಜೋಡಿ ರಹಸ್ಯ ನಿಶ್ಚಿತಾರ್ಥ? ಬಿ ಟೌನ್ ಹೇಳುವುದೇನು?

08:17 PM Dec 30, 2020 | Team Udayavani |

ಮುಂಬೈ: ಬಾಲಿವುಡ್ ನಟ ರಣ್ಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಜೋಡಿಯಾಗುತ್ತಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೆ ಇದೀಗ ಅವರಿಬ್ಬರೂ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.

Advertisement

ಈ ಕುರಿತಾದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ವೈರಲ್ ಆಗಿದೆ.

ಇತ್ತೀಚೆಗಷ್ಟೆ ಬಾಲಿವುಡ್ ಅಂಗಳದಲ್ಲಿ ನಟ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಪ್ರೀತಿಯ ವಿಚಾರ ಹರಿದಾಡುತ್ತಿತ್ತು. ಈ ಗುಸು ಗುಸು ಸುದ್ದಿಗೆ ನಟ ರಣ್ಬೀರ್ ಪ್ರತಿಕ್ರಿಯೆಯನ್ನೂ ನೀಡಿದ್ದು, ನಾನೂ ಮತ್ತು ಆಲಿಯಾ ಪರಸ್ಪರ ಪ್ರೀತಿಸುತ್ತಿದ್ದೇವೆ  ಸದ್ಯದಲ್ಲಿಯೆ ವಿವಾಹವಾಗಲಿದ್ದೇವೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಅನುಮಾನಗಳಿಗೆ ತೆರೆ ಎಳೆದಿದ್ದರು.

ಆದರೆ ಈ ನಡುವೆ ಸದಾ ಒಂದಲ್ಲಾ ಒಂದು ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಬಾಲಿವುಡ್ ನಟ-ನಟಿಯರು ಇದೀಗ ಸದ್ದಿಲ್ಲದೆ ಜೈಪುರದ ಕಡೆಗೆ ಪ್ರಯಾಣ ಬೆಳೆಸಿದ್ದಾರಂತೆ, ಅಷ್ಟೇ ಅಲ್ಲದೆ ರಣ್ಬೀರ್ ಹಾಗೂ ಆಲಿಯಾ ಕುಟುಂಬದ ಸದಸ್ಯರೂ ಕೂಡ ಅಲ್ಲಿಗೆ ಪಯಣ ಬೆಳೆಸಿದ್ದಾರಂತೆ ಈ ಎಲ್ಲಾ ಬೆಳವಣಿಗೆಗಳು ಇವರಿಬ್ಬರೂ ಸದ್ದಿಲ್ಲದೆ ಎಂಗೇಜ್ ಆಗಿರಬಹುದಾ ಎಂಬ ಗುಸು ಗುಸು  ಮಾತುಗಳಿಗೆ ದಾರಿಮಾಡಿ ಕೊಟ್ಟಿದೆ.

ಇದನ್ನೂ ಓದಿ:  ನಟ ಸೋನು ಸೂದ್ ಗೆ ಒಲಿದ 2020 ರ ಜನೋಪಕಾರಿ ಪ್ರಶಸ್ತಿ

Advertisement

ಈ ಸುದ್ದಿಗೆ ಮತ್ತಷ್ಟು ಪುಷ್ಠಿ ಕೊಡುವಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡಾ ಜೈಪುರದ ಕಡೆ ಪಯಣ ಬೆಳೆಸಿ . ಅಲ್ಲಿರುವ ಸ್ಟಾರ್ ಹೋಟೆಲ್ ಒಂದರಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ನಟ ರಣ್ ವೀರ್ ,ರಣ್ಬೀರ್ ಮತ್ತು ನೀತು ಜೊತೆಯಲ್ಲಿ ಸೆಲ್ಫಿಯೊಂದನ್ನು ಕ್ಲಿಕ್ಕಿಸಿದ್ದು,  ಇದೀಗ ಈ ಸೆಲ್ಫಿ ಪೋಟೋ ಕೂಡಾ ಭಾರಿ ವೈರಲ್ ಆಗಿದೆ.

ಕಳೆದ ಕೆಲ ಸಮಯಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಗಳು ಇದೀಗ ಸದ್ದಿಲ್ಲದೆ ನಿಶ್ವಿತಾರ್ಥವನ್ನೂ ಮಾಡಿಕೊಂಡರಾ ಎಂಬ ಮಾತುಗಳು ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿಗಳನ್ನು ರಣಬೀರ್- ಆಲಿಯಾ ಜೋಡಿಯಾಗಲಿ ಅಥವಾ ಅವರ ಕುಟುಂಬದ ಸದಸ್ಯರಾಗಲಿ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next