Advertisement

ಮ್ಯಾಡ್ರಿಡ್ ಓಪನ್: ಕ್ಲೇ ಕೋರ್ಟ್ ನಲ್ಲಿ ನಡಾಲ್ ವಿರುದ್ದ ಗೆದ್ದ ಜ್ವರೇವ್ ಸೆಮಿ ಫೈನಲ್ ಗೆ

07:31 AM May 08, 2021 | Team Udayavani |

ಮ್ಯಾಡ್ರಿಡ್: ಜರ್ಮನಿಯ ಟೆನ್ನಿಸಿಗ ಅಲೆಕ್ಸಾಂಡರ್ ಜ್ವರೇವ್, ಮ್ಯಾಡ್ರಿಡ್ ಓಪನ್ ಕೂಟದ ಕ್ವಾರ್ಟರ್ ಫೈನಲ್ ನಲ್ಲಿ ಸ್ಪೇನ್ ನ ರಫೇಲ್ ನಡಾಲ್ ವಿರುದ್ದ ಗೆಲುವು ಸಾಧಿಸಿದ್ದಾರೆ.

Advertisement

ನಡಾಲ್ ವಿರುದ್ಧ 6-4, 6-4 ಸೆಟ್ ಗಳ ಅಂತರದಿಂದ ಗೆದ್ದ ಜ್ವರೇವ್ ಸೆಮಿ ಫೈನಲ್ ಪ್ರವೇಶಿಸಿದರು.  ಸೆಮೀಸ್ ನಲ್ಲಿ ಮತ್ತೊಬ್ಬ ಬಲಿಷ್ಠ ಪ್ರತಿಸ್ಪರ್ಧಿ ಡೊಮಿನಿಕ್ ಥೀಮ್ ರನ್ನು ಎದುರಿಸಲಿದ್ದಾರೆ.

ಅಲೆಕ್ಸಾಂಡರ್ ಜ್ವರೇವ್ ಸತತ ಮೂರು ಪಂದ್ಯಗಳಲ್ಲಿ ನಡಾಲ್ ಅವರನ್ನು ಸೋಲಿಸಿದರು. 2019ರ ಎಟಿಪಿ ಮಾಸ್ಟರ್ಸ್ ಫೈನಲ್ ಮತ್ತು 2020ರ ಪ್ಯಾರಿಸ್ ಮಾಸ್ಟರ್ಸ್ ನಲ್ಲಿ ಜ್ವರೇವ್ ಗೆಲುವು ಸಾಧಿಸಿದ್ದರು. ಆದರೆ ಆವೆ ಮಣ್ಣಿನ ಅಂಗಳದಲ್ಲಿ ನಡಾಲ್ ವಿರುದ್ಧ ಮೊದಲ ಜಯ ಸಾಧಿಸಿದರು.

ಟೆನ್ನಿಸ್ ನಲ್ಲಿ ಕ್ಲೇ ಕೋರ್ಟ್ ನಲ್ಲಿ ರಫೇಲ್ ನಡಾಲ್ ರನ್ನು ಸೋಲಿಸುವುದೆಂದರೆ ಅದು ದೊಡ್ಡ ಸಾಧನೆ. ತುಂಬಾ ಜನರು ಈ ಸಾಧನೆ ಮಾಡಿಲ್ಲ. ಈ ವಾರ  ನನಗೆ ತುಂಬಾ ಅದ್ಭುತವಾದ ವಾರ ಎಂದು ಜ್ವರೇವ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next