Advertisement

ಜಗತ್ತಿನ ಶ್ರೀಮಂತ ಉದ್ಯಮಿ ಸೊರಸ್‌ ಉದ್ಯಮ ಸಾಮ್ರಾಜ್ಯಕ್ಕೆ ಅಲೆಕ್ಸ್‌ ಅಧಿಪತಿ

09:59 PM Jun 12, 2023 | Team Udayavani |

ನ್ಯೂಯಾರ್ಕ್‌:ಜಗತ್ತಿನ ಶ್ರೀಮಂತ ಉದ್ಯಮಿ ಜಾರ್ಜ್‌ ಸೊರಸ್‌ ತನ್ನ 2,500 ಕೋಟಿ ಡಾಲರ್‌ ಒಡೆತನದ ಉದ್ಯಮ ಸಾಮ್ರಾಜ್ಯವನ್ನು ತನ್ನ ಕಿರಿಯ ಪುತ್ರ ಅಲೆಕ್ಸಾಂಡರ್‌ ಸೊರಸ್‌ಗೆ ಹಸ್ತಾಂತರಿಸುತ್ತಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ 37 ವರ್ಷದ ಅಲೆಕ್ಸಾಂಡರ್‌ ಸೊರಸ್‌(ಅಲೆಕ್ಸ್‌), “ತಂದೆಗೆ 92 ವರ್ಷ ಆಗಿದೆ. ವಯಸ್ಸಿನ ಕಾರಣದಿಂದ ಎಲ್ಲಾ ಉದ್ಯಮವನ್ನು ಹಸ್ತಾಂತರಿಸುತ್ತಿದ್ದಾರೆ,’ ಎಂದು ಹೇಳಿದ್ದಾರೆ.

Advertisement

ಸೊರಸ್‌ ಕುಟುಂಬವು “ಓಪನ್‌ ಸೊಸೈಟಿ ಫೌಂಡೇಶನ್‌’ ಎಂಬ ಎನ್‌ಜಿಒ ಹೊಂದಿದ್ದು, ವಿಶ್ವಾದ್ಯಂತ 120ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದೆ. ಮಾನವ ಹಕ್ಕುಗಳು ಸೇರಿದಂತೆ ಪ್ರಜಾಪ್ರಭುತ್ವಕ್ಕಾಗಿ ಹೋರಾಡವ ಸಂಘಟನೆಗಳಿಗೆ ವಾರ್ಷಿಕ ಸುಮಾರು 150 ಕೋಟಿ ಡಾಲರ್‌ಗಳನ್ನು ದೇಣಿಗೆಯಾಗಿ ಈ ಸಂಸ್ಥೆ ನೀಡುತ್ತದೆ. ಜತೆಗೆ ಹಲವು ದೇಶಗಳ ಸರ್ಕಾರಗಳನ್ನು ಪತನಗೊಳಿಸಿದ್ದಕ್ಕೂ ಬೆಂಬಲ ನೀಡಿದ ಆರೋಪ ಎದುರಿಸುತ್ತಿದೆ.

ಕಳೆದ ಎರಡು ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಬಲಪಂಥೀಯ ಮನೋಭಾವದ ಜಾರ್ಜ್‌ ಸೊರಸ್‌ ಬೆಂಬಲಿಸಿದ್ದರು. ಅಲ್ಲದೇ ಪ್ರಚಾರಕ್ಕಾಗಿ ದೊಡ್ಡ ಮೊತ್ತದ ದೇಣಿಗೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next