Advertisement

ಬ್ಯಾನರ್‌ ಅಳವಡಿಸಿ ಎಚ್ಚರಿಕೆ, ಮತ ಬಹಿಷ್ಕಾರಕ್ಕೆ  ಸಿದ್ಧತೆ

11:03 AM May 06, 2018 | Team Udayavani |

ಪುಣಚ: ಜನಪ್ರತಿನಿಧಿಗಳೇ ನಮಗೆ ಹಣ ಕೊಡಿ ಎಂದು ಕೇಳುವುದಿಲ್ಲ. ಆದರೆ ಮೂಲ ಸೌಕರ್ಯಗಳಾದ ರಸ್ತೆ ಸಂಪರ್ಕ ಕೊಡಿ, ನೀರಿನ ವ್ಯವಸ್ಥೆ ಕಲ್ಪಿಸಿ. ಆ ಬಳಿಕ ನಮ್ಮಲ್ಲಿಗೆ ಮತ ಯಾಚಿಸಲು ಬನ್ನಿ ಎಂದು ಪುಣಚ ಗ್ರಾಮದ ಅಗ್ರಾಳದ ಮೂಲ ಸೌಕರ್ಯ ವಂಚಿತರು ಫಲಕ ಅಳವಡಿಸಿ, ಮತ ಬಹಿಷ್ಕಾರಕ್ಕೆ ಅಣಿಯಾಗಿದ್ದಾರೆ.

Advertisement

ಅಗ್ರಾಳ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಯೂ ಸರಿಯಾಗಿ ಇಲ್ಲ. ಇಲ್ಲಿ ಕೆಲವು ಮನೆಗಳಿದ್ದು, ನಿವಾಸಿಗಳು ಚುನಾವಣೆಯ ಸಂದರ್ಭ ಈ ಎಚ್ಚರಿಕೆಯ ಬ್ಯಾನರ್‌ ಅಳವಡಿಸಿದ್ದಾರೆ. ಪುಣಚ ಪರಿಯಾಲ್ತಡ್ಕದಿಂದ ಗರಡಿಬೈಲು ಆಗಿ ಅಗ್ರಾಳಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣ ಆಗಬೇಕು. ಜಮೀನು ಹೊಂದಿರುವ ವ್ಯಕ್ತಿಗಳ ಮಧ್ಯೆ ತಕರಾರು ಇರುವುದರಿಂದ ಅಗ್ರಾಳದ ಮೇಲ್ಭಾಗದಲ್ಲಿರುವ ನಿವಾಸಿಗಳು ರಸ್ತೆ ಸಂಪರ್ಕದಿಂದ ವಂಚಿತರಾಗಿದ್ದಾರೆ. ಈ ರಸ್ತೆ ತಕರಾರನ್ನು ಮಾತುಕತೆ ಮೂಲಕ ಬಗೆಹರಿಸಬಹುದು ಎಂದು ರಸ್ತೆ ವಂಚಿತರು ಹೇಳುತ್ತಾರೆ.

ಅಂತೂ ವಿಧಾನಸಭಾ ಚುನಾವಣೆ ಅವರ ಹಲವಾರು ವರ್ಷಗಳ ಬೇಡಿಕೆಯೊಂದನ್ನು ಈಡೇರಿಸುವ ದಾರಿ ಆಗಬಹುದು ಎಂಬ ಆಶಾವಾದದೊಂದಿಗೆ ರಸ್ತೆ ಪಕ್ಕದಲ್ಲೇ ಫಲಕ ಅಳವಡಿಸಿ ರಾಜಕೀಯ ಪಕ್ಷಗಳ ಧುರೀಣರ, ಊರಿನ ಗಣ್ಯರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next