Advertisement
ರಾಜಧಾನಿಯಲ್ಲಿನ ಪ್ರತಿಷ್ಠಿತ ಬಡಾವಣೆಗಳು, ಹೋಟೆಲ್‌ಗಳು ಹಾಗೂ ನಿವೃತ್ತ ಐಎಎಸ್-ಐಪಿಎಸ್, ರಾಜಕಾರಣಿಗಳು-ಉದ್ಯಮಿಗಳ ಮನೆಗಳನ್ನೇ ಇವರು ಟಾರ್ಗೆಟ್ ಮಾಡಿ ಮನೆಗಳವು ಮಾಡುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶೀಲಿಸಿದೆ ಮನೆ ಬಾಡಿಗೆ ನೀಡುವುದರಿಂದ ಈ ಕೃತ್ಯ ನಡೆದಿದೆ. ಹೀಗಾಗಿ ಮನೆ ಬಾಡಿಗೆ ನೀಡುವವರವಿರುದ್ಧವೂ ಕ್ರಮ ಜರುಗಿಸಲಾಗುವುದು. ಮನೆಗಳ್ಳತನಕ್ಕಾಗಿ ಬರುತ್ತಿದ್ದ ವಿದೇಶಿಗರು ವಿಲ್ಲಾ ಹಾಗೂ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿಗಳ ಬಗ್ಗೆ ಅಮೆರಿಕಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕೃತ್ಯದ ಮಾದರಿ: ಕೊಲಂಬಿಯಾದಿಂದ ಐವರು ಆರೋಪಿಗಳು ಜೂನ್ ಮೊದಲ ವಾರದಲ್ಲಿ ನಗರಕ್ಕೆ ಬಂದಿದ್ದರು. ಬರುವ ಮೊದಲೇ ಆನ್‌ಲೈನ್ ಮೂಲಕ ದಿನಕ್ಕೆ 4 ಸಾವಿರ ಬಾಡಿಗೆ ಎಂಬಂತೆ ಕುಂಬಳಗೋಡು ಠಾಣಾ ವ್ಯಾಪ್ತಿಯ ವಿಲ್ಲಾ ಹಾಗೂ ಪುಟ್ಟೇನ ಹಳ್ಳಿಯಲ್ಲಿರುವ ಸರ್ವೀಸ್ ಅಪಾರ್ಟ್‌ಮೆಂಟ್ ಕಾಯ್ದಿರಿಸಿದ್ದರು. ನಂತರ ಅಲ್ಲಿಯೇ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ. ಓಎಲ್‌ಎಕ್ಸ್‌ನಲ್ಲಿ ಕಾರುಗಳನ್ನು ಖರೀದಿಸಿ, ಜಿಪಿಎಸ್ ಮ್ಯಾಪ್‌ನಲ್ಲಿ ನಗರದ ಪ್ರಮುಖ ಬಡಾವಣೆಗಳಲ್ಲಿ ಹಗಲು ರಾತ್ರಿ ಸಂಚರಿಸಿ ಮಾಹಿತಿ ಕಲೆ ಹಾಕುತ್ತಿದ್ದರು.
ವಾಕಿಟಾಕಿ ಬಳಕೆ: ಬಳಿಕ ಆರೋಪಿತೆ ಕಿಂಬರ್ಲಿ ಬುರ್ಖಾ ಅಥವಾ ಐಶಾರಾಮಿ ಉಡುಪು ಧರಿಸಿ, ಹೆಗಲಿಗೆ ಬ್ಯಾಗ್ ಹಾಕಿಕೊಂಡು ಮೊದಲೇ ಗುರುತಿಸಿದ ಮನೆಗೆ ಹೋಗಿ ಕಾಲಿಂಗ್ ಬೆಲ್ ಮಾಡುತ್ತಿದ್ದಳು. ಪ್ರತಿಕ್ರಿಯೆ ಬಾರದಿದ್ದಾಗ ಸಣ್ಣ ಕಲ್ಲು ಎಸೆದು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದಳು. ಬಳಿಕ ವಾಕಿ ಟಾಕಿ ಮೂಲಕ ಕೂಗಳತೆ ದೂರದಲ್ಲಿದ್ದ ಇತರರನ್ನು ಮಾಹಿತಿ ನೀಡಿ ಕರೆಸಿಕೊಳ್ಳುತ್ತಿದ್ದಳು. ಐವರಲ್ಲಿ ಮೂವರು ಬಾಗಿಲು ಮುರಿಯವ ಉಪಕರಣ ಬಳಸಿ ಒಳ ಪ್ರವೇಶಿಸಿ ಕಳ್ಳತನ ಮಾಡಿದರೆ, ಇಕೆ, ಮನೆ ಬಳಿ ಮತ್ತೂಬ್ಬ ಕಾರಿನಲ್ಲಿ ಕಾಯುತ್ತಿದ್ದ. ಕೆಲಸ ಮುಗಿದ ಕೂಡಲೇ ಐವರು ಒಟ್ಟಿಗೆ ಪರಾರಿಯಾಗುತ್ತಿದ್ದರು.
ಪತ್ತೆ ಹೇಗೆ?: ಜೂನ್ 22ರಂದು ಜಯನಗರದ 5ನೇ ಹಂತದ ನಿವಾಸಿ ಮುರಳಿಕೃಷ್ಣ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಗಿಲು ಒಡೆಯುತ್ತಿರುವ ದೃಶ್ಯ ಸೇರಿ ಇತರ ದೃಶ್ಯಗಳು ಸೆರೆಯಾಗಿದ್ದವು. ಈ ಮಾಹಿತಿಯನ್ನಾಧರಿಸಿ ಪರಿಶೀಲಿಸಿದಾಗ ಕಾರು ನಂಬರ್ ಪತ್ತೆಯಾಗಿತ್ತು. ಅನಂತರ ಜುಲೈನಲ್ಲಿ ನಡೆದ ಮತ್ತೊಂದು ಕೃತ್ಯದ ದೃಶ್ಯಾವಳಿಯಿಂದ ಕಾರುಗಳ ಬಗ್ಗೆ ಅನುಮಾನ ಬಂದು ತನಿಖೆಗೆ ಮುಂದಾಗಿದ್ದರು. ಇದರಿಂದ ಆನ್‌ಲೈನಿನಲ್ಲಿ ಕಾರು ಖರೀದಿಸಿರುವುದು ಪತ್ತೆಯಾಗಿತ್ತು. ಜತೆಗೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರನ್ನು ಓಎಲ್‌ಕ್ಸ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದರು. ಈ ಮಾಹಿತಿಯಿಂದ ಖರೀದಿದಾರರ ಸೋಗಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.