Advertisement

ಲೋಕಲ್‌ ಫೈಟ್‌ನಲ್ಲಿಡಿ ಎಚ್ಚರಿಕೆ ಹೆಜ್ಜೆ

03:27 PM Dec 07, 2020 | Adarsha |

ಹುಬ್ಬಳ್ಳಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಚ್ಚರಿಕೆ ಹೆಜ್ಜೆ ಇರಿಸುವ ಮೂಲಕ ವಿಜಯಸಾಧಿಸಬೇಕೆಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು.

Advertisement

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ರವಿವಾರ ನಡೆದ ಜೆಡಿಎಸ್‌ ಪಕ್ಷದ ತಾಲೂಕು ಅಧ್ಯಕ್ಷ-ಉಪಾಧ್ಯಕ್ಷರೊಂದಿಗಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಪಂ ಚುನಾವಣೆಗೆ ಮೊದಲ ಆದ್ಯತೆ ನೀಡಬೇಕಾಗಿದ್ದು, ನಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕಾಗಿದೆ. ಸ್ಥಳೀಯ ಮುಖಂಡರಿಗೆ ಮೊದಲ ಆದ್ಯತೆ ನೀಡಿ ಸ್ಥಳೀಯವಾಗಿ ಏನು ಮಾಡಲು ಸಾಧ್ಯ ಅದೆಲ್ಲವನ್ನು ಮಾಡಲು ಅಭ್ಯರ್ಥಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುವುದು ಎಂದರು.

ಈಗಾಗಲೇ ಅಳ್ನಾವರ, ಅಣ್ಣಿಗೇರಿ ಪಪಂ ಜೆಡಿಎಸ್‌ ಹಿಡಿತದಲ್ಲಿದ್ದು, ಎಲ್ಲೆಡೆ ಉತ್ತಮ ಪ್ರಚಾರ ಮಾಡುವ ಮೂಲಕ ಗ್ರಾಪಂ ಚುನಾವಣೆಯಲ್ಲಿ ಪ್ರಭುತ್ವ ಸಾಧಿಸಬೇಕು. ಕೆಲವೊಂದು ಗ್ರಾಪಂಗಳ ಚುನಾವಣೆಯಲ್ಲಿ ಸ್ಥಳೀಯ ಹೊಂದಾಣಿಕೆ ಅವಶ್ಯವಾಗಿದ್ದು, ಅದಕ್ಕಾಗಿ ಹಲವು ಕಡೆ ಮಾತುಕತೆ ಮಾಡಲಾಗಿದೆ. ಇನ್ನುಳಿದ ಕಡೆ ಮಾತುಕತೆಯಾಗಬೇಕಿದೆ. ಅವಶ್ಯಕತೆ ಇದ್ದಲ್ಲಿ ಸ್ಥಳೀಯ ಮುಖಂಡರೇ ಅದರ ಜವಾಬ್ದಾರಿ ತೆಗೆದುಕೊಂಡು ಮುನ್ನಡೆಯಬಹುದು ಎಂದು ಹೇಳಿದರು.

ಡಿ. 16ರೊಳಗೆ ಎಲ್ಲ ಗ್ರಾಪಂಗಳಿಗೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಬೇಕು. ಡಿ. 9ರಂದು ನವಲಗುಂದ, 10ರಂದು ಕುಂದಗೋಳ ಹಾಗೂ 11ರಂದು ಕಲಘಟಗಿ-ಧಾರವಾಡದಲ್ಲಿ ಸಭೆ ನಡೆಸಿ ಎಲ್ಲ ಸಿದ್ದತೆ ಮಾಡಿಕೊಳ್ಳೋಣ ಎಂದರು.

Advertisement

ಇದನ್ನೂ ಓದಿ:ರೈತ ಭವನ-ಹು.ಧಾ. ಒನ್‌ ಕೇಂದ್ರ ಉದ್ಘಾಟನೆ

ಜೆಡಿಎಸ್‌ ಮುಖಂಡ ಗುರುರಾಜ ಹುಣಸಿಮರದ ಮಾತನಾಡಿ, ಗ್ರಾಪಂ ಚುನಾವಣೆ ಎಂದು ಅಲಕ್ಷéಮಾಡುವಂತಿಲ್ಲ. ಅದಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳುವ ಮೂಲಕ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳ ಜಯಕ್ಕೆ ಎಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕೆಂದರು.

ರಾಜಣ್ಣಾ ಕೊರವಿ, ಸಿದ್ದ ತೇಜಿ ಇನ್ನಿತರರು ಮಾತನಾಡಿದರು. ಮುಖಂಡ ರಾದ ಗಂಗಾಧರ, ಹಜರತಅಲಿ ಜೋಡಮನಿ ಸೇರಿದಂತೆ ವಿವಿಧ ತಾಲೂಕಿನ ಅಧ್ಯಕ್ಷರು, ಉಪಾಧ್ಯಕ್ಷರು ಆಗಮಿಸಿದ್ದರು.

-ಚುನಾವಣೆ ಕುರಿತು ನಮ್ಮವರಿಗೆ ಧೈರ್ಯ-ಶಕ್ತಿ ಕಡಿಮೆಯಾಗಿದೆ. ಅವರಿಗೆ ಶಕ್ತಿ-ಧೈರ್ಯ ತುಂಬಲು ನಾಯಕರಾದರೂ ಮುಂದೆ ಬರಬೇಕಾಗಿದೆ. ದೂರದ ಬೆಂಗಳೂರಿನಲ್ಲಿ ಕುಳಿತು ಪತ್ರಿಕಾ ಪ್ರಕಟಣೆ ನೀಡುವುದಲ್ಲ. ನಾಯಕರಾದವರು ಪ್ರತಿ ಜಿಲ್ಲೆ-ತಾಲೂಕುಗಳಿಗೆ ಆಗಮಿಸಿ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ.

ಗುರುರಾಜ ಹಣಸೀಮರದ,

ಜೆಡಿಎಸ್‌ ಮುಖಂಡ

 

Advertisement

Udayavani is now on Telegram. Click here to join our channel and stay updated with the latest news.

Next