Advertisement
ಕುಫ್ರಿ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 55 ಇಂಚು ಹಿಮವರ್ಷವಾಗಿದೆ. ಸೋಮವಾರವೂ ಹಿಮವರ್ಷ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದೆ. ಇದೇ ವೇಳೆ ಉತ್ತರ ಕಾಶ್ಮೀರದ ಗುಲ್ಮರ್ಗ್‌ನಲ್ಲಿ ಶನಿವಾರ ರಾತ್ರಿ ಉಷ್ಣಾಂಶ ಮೈನಸ್ 10 ಡಿಗ್ರಿ ಸೆಲ್ಸಿಯೆಸ್‌ಗೆ ತಲುಪಿದೆ. ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್ ಆಗಿರುವ ಪಗಲ್ಗಂನಲ್ಲಿ ಮೈನಸ್ 1.8 ಡಿಗ್ರಿ ಸೆ. ಉಷ್ಣಾಂಶ ವರದಿಯಾಗಿದೆ.ನೆರೆ ರಾಷ್ಟ್ರ ಪಾಕಿಸ್ತಾನದ ಪ್ರವಾಸಿತಾಣವಾದ ಮುರ್ರೀಯಲ್ಲಿ ಶನಿವಾರ ಸಂಭವಿಸಿದ ಅನಿರೀಕ್ಷಿತ ಹಿಮವರ್ಷದಿಂದಾಗಿ ಸಾವಿ ಗೀ ಡಾ ದ ವರ ಸಂಖ್ಯೆ ಭಾನುವಾರ 23ಕ್ಕೆ ಏರಿಕೆಯಾಗಿದೆ.
ಶನಿವಾರ ರಾತ್ರಿಯಿಂದ ಪಂಜಾಬ್, ಹರ್ಯಾಣ ಮತ್ತು ನವದೆಹಲಿಯ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಪಂಜಾಬ್‌ನಲ್ಲಿ 10.2 ಡಿಗ್ರಿ ಸೆಲ್ಸಿಯೆಸ್, ಹರ್ಯಾಣದಲ್ಲಿ 11.8 ಡಿಗ್ರಿ ಸೆಲ್ಸಿಯೆಸ್ ಮತ್ತು ದೆಹಲಿಯಲ್ಲಿ 13.8 ಡಿಗ್ರಿ ಸೆಲ್ಸಿಯೆಸ್ ಉಷ್ಣಾಂಶ ದಾಖ ಲಾ ಗಿ ದೆ. ದೆಹಲಿಯಲ್ಲಿ ಕಳೆದ 22 ವರ್ಷಗಳ ಜನವರಿಯ ಏಕದಿನದಲ್ಲಿ ಸುರಿದ ಮಳೆಯ ದಾಖಲೆಗಳೆಲ್ಲವನ್ನೂ ಶನಿವಾರದ ಮಳೆ ಮುರಿದಿದ್ದಾಗಿ ತಿಳಿಸಲಾಗಿದೆ. ಇದನ್ನೂ ಓದಿ : ಹುಬ್ಬಳ್ಳಿ :ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಪತ್ನಿ