Advertisement

ಕ್ಯಾಶ್ ತೆಗೆದಿಟ್ಟುಕೊಳ್ಳಿ!; ಬ್ಯಾಂಕ್ ಗಳಿಗೆ 4 ದಿನ ಸರಣಿ ರಜೆ

02:57 PM Aug 11, 2017 | |

ನವದೆಹಲಿ: ನಾಲ್ಕು ದಿನ ಸರಣಿ ರಜೆಯ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಬ್ಯಾಂಕ್ ವ್ಯವಹಾರ ನಡೆಸಲು ಸಾಧ್ಯವಿಲ್ಲ. ದೇಶದ ಬಹುತೇಕ ಭಾಗಗಳಲ್ಲಿ ಆಗಸ್ಟ್ 12ರಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ ಗೆ ರಜೆ. ಇದರಿಂದಾಗಿ ಜನಸಾಮಾನ್ಯರು ನಗದು ಹಣಕ್ಕಾಗಿ ಪರದಾಡುವಂತಾಬಹುದಾಗಿದೆ.

Advertisement

ಆಗಸ್ಟ್ 12 (2ನೇ ಶನಿವಾರ), ಆ.13 ಭಾನುವಾರ, ಆ.14 ಕೃಷ್ಣ ಜನ್ಮಾಷ್ಠಮಿ ಹಾಗೂ ಆ.15 ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ಬ್ಯಾಂಕ್ ಗಳ ವ್ಯವಹಾರ ಬಂದ್ ಆಗಲಿದೆ. ಅಲ್ಲದೆ ಸರಣಿ ರಜೆಯಿಂದಾಗಿ ಗ್ರಾಹಕರಿಗೆ ಬ್ಯಾಂಕ್ ಸೇವೆ ಲಭ್ಯವಾಗುವುದಿಲ್ಲ.

ಹಾಗಾಗಿ ಬ್ಯಾಂಕ್ ವ್ಯವಹಾರ ಬಂದ್ ಆಗುವುದರಿಂದ ಎಟಿಎಂ ಗ್ರಾಹಕರು ಕೂಡಾ ನಗದು ಹಣಕ್ಕಾಗಿ ಪರದಾಡುವಂತಾಗಲಿದೆ. ಅದಕ್ಕಾಗಿ ಮುಂಜಾಗ್ರತೆಯ ನಿಟ್ಟಿನಲ್ಲಿ ಅಗತ್ಯಕ್ಕೆ ಬೇಕಾಗಿರುವ ನಗದನ್ನು ತೆಗೆದಿಟ್ಟುಕೊಳ್ಳಿ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next