Advertisement
ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾನಿಕ್ ಸಿನ್ನರ್ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ವಿರುದ್ಧ 6-2, 6-4, 7-6 (7-3)ರಿಂದ ಗೆದ್ದು ಬಂದರು.
ಜಾನಿಕ್ ಸಿನ್ನರ್ ಇನ್ನು ನೂತನ ನಂ.1 ಆಟಗಾರನ ಗೌರವ ಸಂಪಾದಿಸಲಿದ್ದಾರೆ. ಗಾಯಾಳಾದ ಕಾರಣ ಕ್ಯಾಸ್ಪರ್ ರೂಡ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ನೊವಾಕ್ ಜೊಕೋವಿಕ್ ತ್ಯಜಿಸಿದ್ದರಿಂದ ಅವರ ನಂ.1 ಪಟ್ಟ ಜಾರಿದೆ. ಬೋಪಣ್ಣ ಜೋಡಿ ಸೆಮಿಗೆ
ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ- ಮ್ಯಾಥ್ಯೂ ಎಬೆxನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇವರು ಬೆಲ್ಜಿಯಂನ ಸ್ಯಾಂಡರ್ ಜಿಲ್-ಜೋರಾನ್ ವೀಜೆನ್ ವಿರುದ್ಧ ಕಠಿನ ಹೋರಾಟ ನಡೆಸಿ 7-6 (3), 5-7, 6-1 ಅಂತರದ ಜಯ ಸಾಧಿಸಿದರು.
Related Articles
ವನಿತಾ ಸಿಂಗಲ್ಸ್‌ನಲ್ಲಿ ಜೆಕ್ ಆಟಗಾರ್ತಿ ಎಲೆನಾ ರಿಬಾಕಿನಾ ಆಟ ಕೊನೆಗೊಂಡಿದೆ. ಇವರೆದುರಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಇಟಲಿಯ ಜಾಸ್ಮಿನ್ ಪೌಲಿನಿ 6-2, 4-6, 6-4ರಿಂದ ಗೆದ್ದರು.
Advertisement