Advertisement

ಮೂರು ವರ್ಷಗಳಲ್ಲಿ ಪಾಕ್‌ಗೆ ತೆರಳಿದ 100 ಕಾಶ್ಮೀರಿಗಳು ನಾಪತ್ತೆ!

09:16 PM Feb 07, 2021 | Team Udayavani |

ಶ್ರೀನಗರ: ಭಾರತೀಯ ಭದ್ರತಾಸಂಸ್ಥೆಗಳು ದೇಶದ ಭದ್ರತೆಗೆ ಆತಂಕ ಒಡ್ಡಿರುವ ಸಂಗತಿಯೊಂದನ್ನು ಬಹಿರಂಗಪಡಿಸಿವೆ.

Advertisement

ಕಳೆದ 3 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ತೆರಳಿರುವ ಕಾಶ್ಮೀರದ 100 ಯುವಕರು, ಒಂದೋ ವಾಪಸ್‌ ಬಂದಿಲ್ಲ ಅಥವಾ ಮರಳಿದ ಬಳಿಕ ನಾಪತ್ತೆಯಾಗಿದ್ದಾರೆ. ಈ ಯುವಕರು ಪಾಕ್‌ ಭಯೋತ್ಪಾದಕ ಸಂಘಟನೆಗಳ ಸ್ಲಿಪರ್‌ಸೆಲ್‌ ರೀತಿ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಯಿದೆ ಎಂಬ ಬಲವಾದ ಅನುಮಾನ ವ್ಯಕ್ತಪಡಿಸಲಾಗಿದೆ.

ಈ ಅನುಮಾನ ಹುಟ್ಟಲು ಕಾರಣ ಕಳೆದವರ್ಷ ಏಪ್ರಿಲ್‌ನಲ್ಲಿ ಉತ್ತರ ಕಾಶ್ಮೀರದ ಹಂದ್ವಾರಾದಲ್ಲಿ ಸಾವನ್ನಪ್ಪಿದ ಐದು ಉಗ್ರರು. ಅದರಲ್ಲೊಬ್ಟಾತ ಕಾಶ್ಮೀರಿ. ಆತ 2018ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದರೂ, ಬಳಿಕ ಭಾರತಕ್ಕೆ ಮರಳಿಯೇ ಇಲ್ಲ! ಕಳೆದ ವರ್ಷ ಏ.1ರಿಂದ 6ರವರೆಗೆ ಭಾರತ ಪ್ರವೇಶಿಸಲು ಯತ್ನಿಸಿದ ಉಗ್ರರ ಗುಂಪುಗಳಲ್ಲಿ; ದಕ್ಷಿಣ ಕಾಶ್ಮೀರದ ಶಾಪಿಯಾನ್‌, ಕುಲ್ಗಾಮ್‌, ಅನಂತ್‌ನಾಗ್‌ ಜಿಲ್ಲೆಯವರೂ ಸೇರಿದ್ದಾರೆ.

ಪಾಕ್‌ ವೀಸಾ ಪಡೆದು ತೆರಳಿದ ಅವರ್ಯಾರೂ ಮರಳಿಲ್ಲ. ಇದರಿಂದ ಭದ್ರತಾಪಡೆಗಳು ಹೀಗೆ ಪಾಕ್‌ಗೆ ತೆರಳಿದವರ ಹಿನ್ನೆಲೆ, ಕುಟುಂಬವನ್ನು ವಿಚಾರಿಸುತ್ತಿದ್ದಾರೆ. ಇದರಿಂದ ಕೆಲವರಿಗೆ ತೊಂದರೆಯಾದರೂ, ಅಪಾಯವನ್ನು ಗರಿಷ್ಠಪ್ರಮಾಣದಲ್ಲಿ ತಗ್ಗಿಸಬಹುದೆಂಬ ಉದ್ದೇಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next