Advertisement

ಅಲಂಗಾರು: ಪಾಲ್ಕೆ ಇಂದಿರಾ ಸಭಾಭವನ ಉದ್ಘಾಟನೆ

03:45 AM Feb 13, 2017 | |

ಮೂಡಬಿದಿರೆ: ಅಲಂಗಾರು ಶ್ರೀ ನಾಗಲಿಂಗ (ಅಯ್ಯ) ಸ್ವಾಮಿ ಮಠದ ಮುಂಭಾಗದಲ್ಲಿ ಪಾಲ್ಕೆ ಕುಟುಂಬಸ್ಥರು ನೂತನವಾಗಿ ನಿರ್ಮಿಸಿರುವ “ಪಾಲ್ಕೆ ಇಂದಿರಾ ಸಭಾಭವನ’ವನ್ನು ರವಿವಾರ ಹಿರಿಯ ನ್ಯಾಯವಾದಿ, ಕರ್ನಾಟಕದ ಮಾಜಿ ಅಡ್ವೋಕೇಟ್‌ ಜನರಲ್‌ ಡಾ| ಬಿ.ವಿ. ಆಚಾರ್ಯ ಉದ್ಘಾಟಿಸಿದರು.

Advertisement

ಸಚಿವ ಬಿ. ರಮಾನಾಥ ರೈ ಅವರು ಸಂಸ್ಕೃತ ಶಿಕ್ಷಣ ಸಂಸ್ಥೆ ಘಟಕವನ್ನು ಉದ್ಘಾಟಿಸಿದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ನಾಮಫಲಕ ವನ್ನು, ಮೈಸೂರು ಶ್ರೀ ಕಾಳಿಕಾಂಬಾ ಕಮಟೇಶ್ವರ ಸ್ವಾಮೀ ದೇವಸ್ಥಾನದ ಅಧ್ಯಕ್ಷ ಎಂ.ಟಿ. ರಾಮಚಂದ್ರ ಅವರು ವಿಶ್ವಕರ್ಮ ದೇವರ ಭಾವಚಿತ್ರವನ್ನು ಅನಾವರಣಗೊಳಿಸಿದರು ಮುಖ್ಯ ಅತಿಥಿಗಳಾಗಿ ಶಾಸಕ ಕೆ. ಅಭಯ ಚಂದ್ರ ಮತ್ತು ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ ಭಾಗವಹಿಸಿದ್ದರು.

ಡಾ| ಬಿ.ವಿ. ಆಚಾರ್ಯ ಮಾತನಾಡಿ, ಹೆತ್ತವರನ್ನು ವೃದ್ಧಾಶ್ರಮಗಳಿಗೆ ಅಟ್ಟುವ ಈ ಕಾಲದಲ್ಲಿ ಸಮಾಜ ಮುಖೀಯಾಗಿ ಬಾಳಿದ ತಮ್ಮ ಹೆತ್ತವರ ಹೆಸರಿನಲ್ಲಿ ಸಮಾಜಕ್ಕೆ ಸಭಾಭವನ ವೊಂದನ್ನು ಸಮರ್ಪಿಸಿರುವ ಧನಂಜಯ ಪಾಲ್ಕೆ ಮತ್ತು ಕುಟುಂಬಸ್ಥರ ಆಸ್ಥೆ ಶ್ಲಾಘನೀಯ, ಮಾದರಿ ಕೆಲಸವಿದು. ಇಲ್ಲೊಂದು ಸಂಸ್ಕೃತ ಶಿಕ್ಷಣ ಶಾಲಾ ಘಟಕವನ್ನೂ ತೆರೆದಿರು ವುದು ಪ್ರಶಂಸನೀಯ ಎಂದರು.

ಸಚಿವ ಬಿ. ರಮಾನಾಥ ರೈ ಅವರು ಪಾಲ್ಕೆ ಕುಟುಂಬದೊಂದಿಗಿನ ತಮ್ಮ ಸಂಸರ್ಗವನ್ನು ಸ್ಮರಿಸಿ, ವಿಶ್ವಕರ್ಮ ಸಮಾಜವು ಸಾಮಾಜಿಕ ನ್ಯಾಯದಿಂದ ದೂರವಿದ್ದ, ಬಹಳ ಕಠಿನ ಪರಿಸ್ಥಿತಿ ಯಲ್ಲಿದ್ದ ಕಾಲಘಟ್ಟದಲ್ಲಿ ಈ ಸಮಾಜದ ಉದ್ಧಾರಕ್ಕಾಗಿ ಮುತುವರ್ಜಿ ವಹಿಸಿ ದುಡಿದ ಪಾಲ್ಕೆ ಬಾಬುರಾಯ ಆಚಾರ್ಯ ಮತ್ತು ಕುಟುಂಬ ವರ್ಗ ದವರ ಸಾಮಾಜಿಕ, ಧಾರ್ಮಿಕ ಕಾಳಜಿ ಮೆಚ್ಚುವಂಥದ್ದು ಎಂದರು. ಭಾವಚಿತ್ರ ಅನಾವರಣ ಅಯ್ಯ ಜಗದ್ಗುರು ಸ್ವಾಮಿ ಮಠದ ಜೀರ್ಣೋದ್ಧಾರ ಕಾರ್ಯದ ರೂವಾರಿಗಳಾಗಿ ಕೀರ್ತಿಶೇಷರಾದ ಪಾಲ್ಕೆ ಕೃಷ್ಣಯ್ನಾಚಾರ್ಯ, ಪಾರ್ವತಿ ಕೃಷ್ಣಯ್ನಾಚಾರ್ಯ, ಪಾಲ್ಕೆ ಬಾಬು ರಾಯ ಆಚಾರ್ಯ, ದಿ| ಇಂದಿರಾ ಬಿ., ಪಾಲ್ಕೆ ಸದಾಶಿವ ಆಚಾರ್ಯ, ಪಾಲ್ಕೆ ಯೋಗೀಶ ಆಚಾರ್ಯ, ಅಡ್ಯಾರ್‌ ನಾರಾಯಣ ಆಚಾರ್ಯ ಮತ್ತು ಹಳೆಯಂಗಡಿ ವಾಸುದೇವ ಆಚಾರ್ಯ ಅವರ ಭಾವಚಿತ್ರಗಳನ್ನು ಟಿ. ಶಾಂತಾರಾಮ್‌, ಟಿ. ಸುಧಾ, ಸದಾಶಿವ ಆಚಾರ್ಯ, ಶಕುಂತಳಾ ಪೇಜಾವರ, ನಾಗರಾಜ್‌ ಪಾಲ್ಕೆ, ನಯನಾ ಪ್ರಭಾಕರ, ಸಂದೀಪ್‌ ಪಾಲ್ಕೆ, ಭೀಷ್ಮ ಪಾಲ್ಕೆ, ಪುಲ್ವ ಪ್ರಭಾಕರ್‌ ಮತ್ತು ಸೂರ್ಯಕುಮಾರ್‌ ಅನಾ ವರಣಗೊಳಿಸಿದರು.

ಸಭಾ ಭವನದ ನಿರ್ಮಾತೃ, ಕೆನರಾ ಜುವೆಲರ್ನ ಧನಂಜಯ ಪಾಲ್ಕೆ ಪ್ರಸ್ತಾವನೆಗೈದು, ನಮ್ಮ ಹಿರಿಯರು ಹಾಕಿ ಕೊಟ್ಟ ಧಾರ್ಮಿಕ, ಸಾಮಾಜಿಕ ಸೇವಾ ಪರಂಪರೆಯನ್ನು ನಾವು ಮುಂದುವರಿಸುತ್ತಿದ್ದೇವೆ ಎಂದರು. 

Advertisement

ಟಿ. ಶಾಂತಾರಾಮ್‌, ಸಂದೀಪ್‌ ಪಾಲ್ಕೆ, ಭೀಷ್ಮ ಪಾಲ್ಕೆ, ಧನರಾಜ್‌ ಪಾಲ್ಕೆ, ನಾಗರಾಜ್‌ ಪಾಲ್ಕೆ ಮೊದಲಾದವರು ಅತಿಥಿಗಳನ್ನು ಗೌರವಿಸಿದರು. ನಿರ್ಮಾಣ ಕಾಮಗಾರಿಯಲ್ಲಿ ಸಹ ಕರಿಸಿರುವ ಗುತ್ತಿಗೆದಾರ ಶಿವಪ್ರಸಾದ್‌ ರೈ, ವಿನಯ ಪೂಜಾರಿ, ಕುಮಾರ ಗೌಡ,
ಸಮಗ್ರ ನಿರ್ವಹಣೆಗೈದ ರಾಯಪ್ಪ ಗೌಡ ಸ್ವರ್ಣ ಸ್ಮರಣಿಕೆ ಸಹಿತ ಅವರನ್ನು ಪುರಸ್ಕರಿಸಲಾಯಿತು.

ಆರ್‌.ವಿ.ಎಸ್‌. ಸಭಾದ ಅಧ್ಯಕ್ಷ ನಾಗರಾಜ್‌ ಪಾಲ್ಕೆ ಸ್ವಾಗತಿಸಿದರು. ಪಾಲ್ಕೆ ಬಾಬುರಾಯ ಆಚಾರ್ಯರ ಆತ್ಮೀಯರಾಗಿದ್ದ ಮಿಜಾರುಗುತ್ತು ಆನಂದ ಆಳ್ವ ಸಹಿತ ವಿವಿಧೆಡೆಗಳಿಂದ ಅಭಿಮಾನಿಗಳು, ವಿವಿಧ ಕಾಳಿಕಾಂಬಾ ಕ್ಷೇತ್ರಗಳು, ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಬಿ. ಸೀತಾರಾಮ ಆಚಾರ್ಯ ನಿರೂಪಿಸಿ ವಂದಿಸಿದರು.

“ದೇವ ಮಾನವ’ ಪುಸ್ತಕ ಬಿಡುಗಡೆ
ಕೆನರಾ ಜುವೆಲರ್ ಸ್ಥಾಪಕ, ಧಾರ್ಮಿಕ, ಸಾಮಾಜಿಕ ಮುಂದಾಳು ದಿ| ಪಾಲ್ಕೆ ಬಾಬುರಾಯ ಆಚಾರ್ಯ ಅವರ ಕುರಿತು ಮೈಸೂರಿನ “ಗಾಯತ್ರಿ ಕುಟುಂಬ’ದವರು ಪುನರ್‌ಮುದ್ರಿಸಿರುವ, ಡಾ| ಜಿ. ಜ್ಞಾನಾ ನಂದ ಅವರು ಬರೆದಿರುವ “ದೇವ ಮಾನವ’ ಕೃತಿಯನ್ನು ಬಾಬುರಾಯ ಆಚಾರ್ಯ ಅವರ ಪುತ್ರಿ ಆಶಾ ರಾಮಚಂದ್ರ ಮತ್ತು ಪುತ್ರ ಧನಂಜಯ ಪಾಲ್ಕೆ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ಪ್ರದರ್ಶಕರ ಫೆಡರೇಶನ್‌ ಉಪಾಧ್ಯಕ್ಷ ಎಂ.ಟಿ. ರಾಜಾರಾಮ್‌ ಕೃತಿಯ ಬಗ್ಗೆ ಮಾತ ನಾಡಿದರು. ಧನರಾಜ್‌ ಪಾಲ್ಕೆ, ವರ್ಷಿತಾ ಸಂದೀಪ್‌ ಪಾಲ್ಕೆ ಕುಟುಂಬದ ಹಿರಿಯರ ಸಂಸ್ಮರಣೆಗೈದರು. 

Advertisement

Udayavani is now on Telegram. Click here to join our channel and stay updated with the latest news.

Next