Advertisement
ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ಭರವಸೆ ನೀಡಿ 1 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. 2023 ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಹಣ ನೀಡಿರುವುದಾಗಿ ಮೋಕ್ಷಿತ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಕೇರಳದಲ್ಲಿ ಸಚಿತಾ ರೈ ವಿರುದ್ಧ ದಾಖಲಿಸಿದ ಕೇಸುಗಳ ಸಂಖ್ಯೆ ಐದಕ್ಕೇರಿದೆ. ಮಂಜೇಶ್ವರ, ಕುಂಬಳೆ ಠಾಣೆಗಳಲ್ಲಿ ತಲಾ ಒಂದರಂತೆಯೂ, ಬದಿಯಡ್ಕ ಠಾಣೆಯಲ್ಲಿ ಮೂರು ಕೇಸುಗಳು ದಾಖಲಾಗಿವೆ. ಸಚಿತಾ ವಿರುದ್ಧ ಉಪ್ಪಿನಂಗಡಿಯಲ್ಲೂ ಒಂದು ಪ್ರಕರಣ ದಾಖಲಾಗಿದೆ.
ಬದಿಯಡ್ಕ: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಬದಿಯಡ್ಕ ಪೇಟೆಯಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುವ ಪಡಿಯಡ್ಪು ನಿವಾಸಿ ಶಿವಪ್ಪ ನಾಯ್ಕ ಅವರ ಪತ್ನಿ ಶಾಂತಾ ಅವರಿಂದ 2,000 ರೂ. ಪಡೆದು ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ರೀತಿ ನೀರ್ಚಾಲು ಪೇಟೆಯಲ್ಲೂ ಲಾಟರಿ ವ್ಯಾಪಾರಿಯ ಕೈಯಿಂದ 1,250 ರೂ. ಹಣ ಪಡೆದು ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿ ಪೊಲೀಸರು ಮಂಜೇಶ್ವರ ನಿವಾಸಿಯನ್ನು ವಶಕ್ಕೆ ಪಡೆದಿದ್ದಾರೆ.