Advertisement

ಅಕಾಲಿಕ ಮಳೆಗೆ ಬೆಳೆ ಹಾನಿ

11:52 AM Apr 20, 2020 | Naveen |

ಆಲಮೇಲ: ಭಾರಿ ಬಿರುಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಬಾಳಿ, ಪಪ್ಪಾಯ, ಮೆಕ್ಕೆಜೋಳ, ಗೋಧಿ ಸೇರಿದಂತೆ ಅನೇಕ ಬೆಳೆಗಳು ಹಾಳಾಗಿವೆ. ಆಲಮೇಲ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 500 ಎಕರೆ ನೆಲಕಚ್ಚಿವೆ. ಅದರಲ್ಲಿ ಸುಮಾರ 200 ಎಕರೆಯಷ್ಟು ಕೊಯ್ಲಿಗೆ ಬಂದಿದ್ದು ಲಾಕ್‌ ಡೌನ್‌ನಿಂದ ಮಾರುಕಟ್ಟೆಗೆ ಹೋಗದೆ ಉಳಿದುಕೊಂಡಿದ್ದ ಪರಿಣಾಮ ಶನಿವಾರ ಬೀಸಿದ ಬಿರುಗಾಳಿ, ಮಳೆಗೆ ಹಾಳಾಗಿವೆ.

Advertisement

ಆಲಮೇಲದ ರವಿಂದ್ರ ಪೋದ್ದಾರ 3 ಎಕರೆಯಲ್ಲಿ 3 ಸಾವಿರ ಬಾಳೆ ಗಿಡಗಳು, ದೇವಣಗಾಂವದ ಸುನಂದಾ ಬಗಲಿಯವರ 2 ಸಾವಿರ ಬಾಳೆ ಗಿಡಗಳು, ಶಂಕರಲಿಂಗ ಸಿಂಪಿ 6 ಎಕರೆಯಲ್ಲಿ 1200 ಬಾಳೆ ಗಿಡಗಳು, ಅಲಹಳ್ಳಿಯ ಗಂಗಾಧರ ಆಳೂರ ಅವರ 500 ಗಿಡಗಳು ಬಿರುಗಾಳಿಗೆ ನೆಲಕಚ್ಚಿವೆ.

ಆಲಮೇಲದ ಮಲ್ಲಿಕಾರ್ಜುಣ ಕೋಣಶೀರಶಗಿಯವರ 2.5 ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯಿ ಗಿಡಗಳು ನೆಲಕ್ಕುರುಳಿವೆ. ಇದರಿಂದ ಅಂದಾಜು 4ರಿಂದ 5 ಲಕ್ಷ ರೂ. ಹಾನಿಯಾಗಿದೆ. ಒಂದು ಎಕರೆ ಎಲೆಕೋಸು ಕೂಡ ಹಾನಿಯಾಗಿದೆ. ಆಲಮೇಲದ ಮಹಾದೇವ ಬಂಡಗಾರ 2 ಎಕರೆ, ಸುನೀಲ ನಾರಣಕರ 1 ಎಕರೆ, ದೇವಣಗಾಂವದ ರೇವಬಾಯಿ ಪೂಜಾರಿ ಅವರು 2 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಲಾಗಿದೆ.

ಆಲಮೇಲ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 500 ಎಕರೆ ಬಾಳೆ ಬೆಳೆಗಾರರಿದ್ದು ಅದರಲ್ಲಿ 200 ಎಕರೆ ಕೊಯ್ಲಿಗೆ ಬಂದಿತ್ತು. ರವಿವಾರ 70 ಎಕರೆ ಸರ್ವೇ ಮಾಡಿದ್ದು ಇನ್ನುಳಿದ ಬೆಳೆಗಳು ಸರ್ವೇ ಮಾಡಲಾಗುತ್ತಿದೆ.
ವೀರೇಶ ಕಟ್ಟಿ,
ತೋಟಗಾರಿಗೆ ಇಲಾಖೆ ಅಧಿಕಾರಿ

ತಿಂಗಳಿಂದ ಲಾಕ್‌ಡೌನ್‌ ತೊಂದರೆ ಜೊತೆಗೆ ಮಳೆ ಗಾಳಿಗೆ ಬೆಳೆಗಳು ಹಾಳಾಗಿವೆ. ರೈತರ ಸಂಕಸ್ಟಕ್ಕೆ ಸರ್ಕಾರ ಸ್ಪಂದಿಸಿ ಸೂಕ್ತ ಪರಿಹಾರ ನೀಡಿ ಆತ್ಮಸ್ಥರ್ಯ ತುಂಬಬೇಕು. ಕಾಟಾಚಾರಕ್ಕೆ ಸರ್ವೇ ಮಾಡಿ ಸುಮ್ಮನಾಗಬಾರದು.
ರವೀಂದ್ರ ಪೋದ್ದಾರ, ರೈತ

Advertisement

ಲಾಕ್‌ಡೌನ್‌ ಹಿನ್ನಲೆಯಲ್ಲಿ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಇತ್ತೀಚೆಗೆ ಸರ್ಕಾರ ಪಾಸ್‌ ನೀಡಿದರೂ ಮಾರುಕಟ್ಟೆಯಲ್ಲಿ ಬೆಲೆ ಬಿದ್ದು ಹೋಗಿದ್ದು ಸಾರಿಗೆ ವೆಚ್ಚವು ಬರುತ್ತಿಲ್ಲ.
ಮಲ್ಲಿಕಾರ್ಜುನ ಕೋಣಶೀರಸಗಿ,
ಪಪ್ಪಾಯಿ ಬೆಳೆಗಾರ

ಅವಧೂತ ಬಂಡಗಾರ

Advertisement

Udayavani is now on Telegram. Click here to join our channel and stay updated with the latest news.

Next