Advertisement

ಆಲಡ್ಕ : ಮೂರು ಜೋಡಿಗಳ ಸರಳ ಸಾಮೂಹಿಕ ವಿವಾಹ

03:28 PM May 06, 2018 | |

ಬಂಟ್ವಾಳ: ಶಂಸುಲ್‌ ಉಲಮಾ ಇಸ್ಲಾಮಿಕ್‌ ಸೆಂಟರ್‌ ಹಾಗೂ ಎಸ್ಕೆಎಸ್ಸೆಸ್ಸೆಫ್‌ ಆಲಡ್ಕ ಶಾಖಾ ವತಿಯಿಂದ 3 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ 3ರಂದು ಗೂಡಿನಬಳಿ ಸಮುದಾಯ ಭವನದ ಶಂಸುಲ್‌ ಉಲಮಾ ವೇದಿಕೆಯಲ್ಲಿ ನಡೆಯಿತು. ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ನಿಕಾಹ್‌ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್‌ ಕೇಂದ್ರ ಸಮಿತಿ ಕಾರ್ಯದರ್ಶಿ ಸ್ವದಖತುಲ್ಲಾ ಫೈಝಿ ಉದ್ಘಾಟಿಸಿದರು. ಆಲಡ್ಕ ಶಾಖಾಧ್ಯಕ್ಷ ಅಬೂಬಕ್ಕರ್‌ ಎನ್‌.ಬಿ. ಅಧ್ಯಕ್ಷತೆ ವಹಿಸಿದ್ದರು.

Advertisement

ಮುಖ್ಯ ಅತಿಥಿಗಳಾಗಿ ಗೂಡಿನಬಳಿ ಮಸ್ಜಿದ್‌ -ಎ-ಮುತ್ತಲಿಬ್‌ ಅಧ್ಯಕ್ಷ ಜಿ. ಮುಹಮ್ಮದ್‌, ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಸ್ಮಾನ್‌ ಹಾಜಿ, ಗುರುವಾಯನಕೆರೆ ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನ್‌ ಶಾಫಿ, ಉದ್ಯಮಿ ಸಿ.ಪಿ. ಆದಂ ತವಕ್ಕಲ್‌, ಖಾದರ್‌ ಮಾಸ್ಟರ್‌ ಬಂಟ್ವಾಳ ಭಾಗವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್‌ ಪ್ರಮುಖರಾದ ಪಿ.ಬಿ. ಹಾಮದ್‌, ಮುಹಮ್ಮದ್‌ ಹನೀಫ್‌ ಹಾಸ್ಕೊ, ಎನ್‌. ಬಶೀರ್‌ ನಂದಾವರ, ಎಂ. ಬಶೀರ್‌ ಆಲಡ್ಕ, ಅಬ್ದುಲ್‌ ಅಝೀಝ್ ಪಿ.ಐ., ಅಬ್ದುಲ್‌ ಮಜೀದ್‌ ಬೋಳಂಗಡಿ, ಮುಹಮ್ಮದ್‌ ಶಫೀಕ್‌, ಅಬ್ದುಲ್‌ ಮುತ್ತಲಿಬ್‌, ಇಸಾಕ್‌ ಫೇಶನ್‌ವೇರ್‌, ಅಶ್ರಫ್‌ ಕೆಇಬಿ, ಮುಹಮ್ಮದ್‌ ವೈ.ಕೆ., ರಫೀಕ್‌ ಇನೋಳಿ, ಸಿ.ಪಿ. ಶಾಕೀರ್‌, ಅಬ್ದುಲ್‌ ಜಬ್ವಾರ್‌ ಬಂಗ್ಲೆಗುಡ್ಡೆ, ಅಬ್ದುಲ್‌ ಖಾದರ್‌ ಪೈಂಟರ್‌, ಮುಹಮ್ಮದ್‌ ಹನೀಫ್‌ ಬೋಗೋಡಿ, ಸಲಾಂ, ಸುಲೈಮಾನ್‌ ಗುಡ್ಡೆಅಂಗಡಿ, ಇಲ್ಯಾಸ್‌ ಬೋಗೋಡಿ, ಮುಹಮ್ಮದ್‌ ಬಂಗ್ಲೆಗುಡ್ಡೆ, ನೌಶಾದ್‌ ಯು. ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸ್ಸೆಫ್‌ ಪಾಣೆಮಂಗಳೂರು ಕ್ಲಸ್ಟರ್‌ ಅಧ್ಯಕ್ಷ ಅಬೂಸ್ವಾಲಿಹ್‌ ಫೈಝಿ ಸ್ವಾಗತಿಸಿ, ಮಂಗಳೂರು ವಲಯಾಧ್ಯಕ್ಷ ರಿಯಾಝ್ ರಹ್ಮಾನಿ ಪ್ರಸ್ತಾವಿಸಿದರು. ಆಲಡ್ಕ ಶಾಖಾ ಸದಸ್ಯ ಖಲೀಲ್‌ ದಾರಿಮಿ ಕಿರಾಅತ್‌ ಪಠಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next