Advertisement

ಇಸ್ರೇಲ್‌ ದೇಶದಲ್ಲಿ ಅಲ್‌ಜಝೀರಾ ಸುದ್ದಿ ವಾಹಿನಿ ಶಾಶ್ವತ ಸ್ಥಗಿತ!

11:33 AM May 06, 2024 | Team Udayavani |

ಟೆಲ್‌ ಅವಿವ್‌: ಕತಾರ್‌ ಮೂಲದ ಸುದ್ದಿ ವಾಹಿನಿ ಅಲ್‌ಜಝೀರಾ ಕಚೇರಿಯನ್ನು ಇಸ್ರೇಲ್‌ನಲ್ಲಿ ಶಾಶ್ವತವಾಗಿ ಮುಚ್ಚಿಸಲು ಬೆಂಜಮಿನ್‌ ನೆತನ್ಯಾಹು ಸರಕಾರ ನಿರ್ಧರಿಸಿದೆ. ಸಂಪುಟವು ಅವಿರೋಧವಾಗಿ ಈ ನಿರ್ಣಯ ಕೈಗೊಂಡಿದೆ ಎಂದು ಎಕ್ಸ್‌ನಲ್ಲಿ ಇಸ್ರೇಲ್‌ ಪ್ರಧಾನಿ ನೆತ ನ್ಯಾಹು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ:IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ

ಇದರ ಬೆನ್ನಲ್ಲೇ, ಇಸ್ರೇಲ್‌ನ ಕೇಬಲ್‌ ಸೇವಾದಾರ ಸಂಸ್ಥೆಯು ಅಲ್‌-ಜಝೀರಾ ಪ್ರಸಾರವನ್ನು ಸ್ಥಗಿತಗೊಳಿಸಿದೆ. ವಿಶೇಷವೆಂದರೆ ಹಮಾಸ್‌ ಮತ್ತು ಇಸ್ರೇಲ್‌ ನಡುವೆ ಯುದ್ಧ ವಿರಾಮ ಒಪ್ಪಂದಕ್ಕೆ ಕತಾರ್‌ ಶ್ರಮಿಸುತ್ತಿದೆ. ಯುದ್ಧ ಆರಂಭವಾದಾಗಿನಿಂದ ಈ ಟಿವಿ, ಇಸ್ರೇಲ್‌ನ ಕ್ರೌರ್ಯ, ಸಾವು ನೋವಿನ ಬಗ್ಗೆ ಹೆಚ್ಚು ಸುದ್ದಿಗಳನ್ನು ಬಿತ್ತರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next