Advertisement
ಚೈತ್ರ, ವೈಶಾಖ ಮಾಸಗಳು ಪರ್ವ ಮಾಸಗಳುಚೈತ್ರ, ವೈಶಾಖ ಮಾಸವನ್ನು ವಸಂತ(ವಸಂತೋತ್ಸವ) ಕಾಲ. ಬಿಸಿಲ ಬೇಗೆಗೆ ಬಸವಳಿದವರಿಗೆ ತಂಪು ಪಾನೀಯವನ್ನು (ಪಾನಕ) ದಾನ ಮಾಡಬೇಕೆಂದಿದೆ. “ಪಂಚೋತ್ಸವಾ ಹಿ… ಕಾರ್ತಿಕ ಉತ್ಸವಃ| ವಸಂತೋಪಿ ದ್ವಿತೀಯಸ್ತು ದಮನಾಖ್ಯಸ್ತತೀಯಖಃ||’ ವೈಶಾಖ ಶುದ್ಧ ಪ್ರತಿಪದದಿಂದ ಹುಣ್ಣಿಮೆ ತನಕ ಆಚರಿಸಬೇಕು. ಇಂದಿಗೂ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಅಕ್ಷಯ ತೃತೀಯದಿಂದ ಹುಣ್ಣಿಮೆವರೆಗೆ ವಸಂತೋತ್ಸವದ ಸಂಪ್ರದಾಯವಿದೆ. ಚೈತ್ರ ಶುದ್ಧ ಪಾಡ್ಯ ಯುಗಾದಿ, ತದಿಗೆಯಂದು ಮತ್ಸ್ಯ ಜಯಂತಿ, ಶುಕ್ಲ ನವಮಿ ರಾಮನವಮಿ, ಹುಣ್ಣಿಮೆಯಂದು ಹನುಮಜ್ಜಯಂತಿ ಮತ್ತು ವೈಶಾಖ ದ್ವಿತೀಯದಂದು ಕೂರ್ಮ ಜಯಂತಿ, ತೃತೀಯಾದಂದು ಅಕ್ಷಯ ತೃತೀಯಾ, ಅಂದೇ ಪರಶುರಾಮ ಜಯಂತಿ, ವಿಜಯಧ್ವಜರ ಆರಾಧನೆ ಮತ್ತು ತ್ರೇತಾ ಯುಗಾದಿಯನ್ನು ಕಾಣುವ ಆಸ್ತಿಕರಿಗೆ ಚೈತ್ರ, ವೈಶಾಖ ಮಾಸಗಳು ಪರ್ವ ಮಾಸಗಳಾಗಿವೆ.
“ಜಮದಗ್ನಿ ಸುತೋ ವೀರ ಕ್ಷತ್ರಿ ಯಾಂತಕರ ಪ್ರಭೋ|’ ಎಂದು ಪರಶುರಾಮನ ಪೂಜೆಯನ್ನು ಮಾಡಬೇಕೆಂದಿದೆ.
ಅಕ್ಷಯವಾಗಲಿ ಎಂಬ ಚಿಂತನೆ ಯಿಂದ ಧನಧಾನ್ಯ…ಅಷ್ಟೆ„ಶ್ವರ್ಯ ಲಕ್ಷಿ¾àಯನ್ನು ಹೊಂದುವ ಮಾನವ ಸಹಜ ಅಭಿಲಾಷೆಗೆ ಅಕ್ಷಯ ತೃತೀಯಾ ಧಾರ್ಮಿಕ ಭಾವನಾತ್ಮಕ ಚಿಂತನೆಯನ್ನು ಕಲ್ಪಿಸುತ್ತದೆ. ಲಕ್ಷ್ಮೀ ಎಂದರೆ ಸಿರಿ ಸಂಪತ್ತು ಅಂದರೆ ಚಿನ್ನ, ಸುವರ್ಣವೂ ಹೌದು. ಲಕ್ಷ್ಮೀ ಎಂದರೆ ಹೊಂದಲ್ಪಡುವವಳು, ಅಪೇಕ್ಷಿಸಲ್ಪಡುವವಳು, ಬೆಳಗುವವಳು ಎಂಬ ಅರ್ಥವಿದೆ. ಹಿರಣ್ಯ- ಭೂಗರ್ಭದಲ್ಲಿ ಸೇರಿಕೊಂಡಿರುವ ಬರೀ ಕಣ್ಣಿಗೆ ಕಾಣದ ಸ್ಥಿತಿಯಲ್ಲಿರುವ ಚಿನ್ನಕ್ಕೆ ಎಲ್ಲರೂ ಆಸೆ ಪಡುವಂತೆ ಎಂಬ ಅರ್ಥ ಲಕ್ಷ್ಮೀ ತಂತ್ರದಲ್ಲಿದೆ. ಸುವರ್ಣ ಸ್ವರೂಪಿ ಲಕ್ಷ್ಮೀ
ಲಕ್ಷ್ಮೀ ಅಂದರೆ ಲಾ – ಅಂದರೆ ದಾನ, ಕ್ಷಿ ಅರ್ಥಾತ್ ಪ್ರೇರೇಪಿಸುವವಳು, ವಾಂಛಿತ ಅಭಿಷ್ಟಗಳನ್ನು ದಾನ ಮಾಡುವವಳು. ಸುವರ್ಣ ಸ್ವರೂಪಿ ಲಕ್ಷ್ಮೀಯನ್ನು ಮನೆ ತುಂಬಿಸಿದರೆ, ಅಕ್ಷಯವಾಗಿ, ಸಕಲ ಸಂಕಷ್ಟಗಳನ್ನು ನಿವಾರಿಸುತ್ತದೆ ಎಂಬುದೇ ಅಕ್ಷಯ ತೃತೀಯಾದ ಹಿಂದಿನ ಸಂದೇಶ.
Related Articles
ಹಿರಣ್ಯ ವರ್ಣ ಲಕ್ಷ್ಮೀಯ ವಾಸವೆಲ್ಲಿ ಎಂದು ಶಾಕ್ತಾಗಮ, ಲಕ್ಷ್ಮೀ ತಂತ್ರ ಮುಂತಾದ ಪಾಂಚರಾತ್ರಾದಿಗಳು ವಿವರಿಸಿವೆ. ಧರ್ಮಾತ್ಮರಿಂದ ಮಾತ್ರ ಲಕ್ಷ್ಮೀಯನ್ನು ಗಳಿಸಲು ಸಾಧ್ಯ. ಶ್ರೀ ಮಹಾವಿಷ್ಣುವಿನ ಬಳಿಯಲ್ಲದೆ ಬೇರೆ ಎಲ್ಲೆಲ್ಲಿ ನೀನು ವಾಸಿಸುತ್ತಿ ಎಂದು ಲಕ್ಷ್ಮೀಗೆ ಕೇಳಲಾಗಿ, ಅದಕ್ಕವಳು “ನಾನು ಯಾರ ಬಳಿ ಹೋಗುವೆನೋ ಅವರನ್ನು ಸಂಪತ್ತಿನಿಂದ (ಲಕ್ಷ್ಮೀ) ಸಂತುಷ್ಟಗೊಳಿಸುವೆನು. ಸ್ವಧರ್ಮ ಪಾಲಕರಲ್ಲಿ ನೆಲೆಸುವೆನು. ಯುವತಿ, ಸ್ತ್ರೀ, ಕುಮಾರಿ, ಕನ್ಯೆ, ಯಜ್ಞ, ಇತ್ಯಾದಿಗಳನ್ನು ಮಾಡುವ ವ್ಯಕ್ತಿಗಳಲ್ಲಿ ನೆಲೆಸುತ್ತೇನೆ…’ ಧರ್ಮ ಪಾರಾಯಣರಲ್ಲೇ ಲಕ್ಷ್ಮೀ ಸನ್ನಿಹಿತಳಾಗುತ್ತಾಳೆ. ಆದರೆ ಆತನಿಗೆ ಲಕ್ಷ್ಮೀಯಿಂದ ಪ್ರಯೋಜನವಿಲ್ಲ. ಅವನು ಧರ್ಮಕಾರ್ಯಕ್ಕಾಗಿ ಸಂಪತ್ತನ್ನು ಖರ್ಚು ಮಾಡಿದರೆ ಲಕ್ಷ್ಮೀ ಧನ್ಯಳಾಗುತ್ತಾಳೆ. ಆದ್ದರಿಂದ ಲಕ್ಷ್ಮೀ ಪ್ರಾಪ್ತಿಗೆ ಶುದ್ಧ ಧರ್ಮಾಚರಣೆ ಅಗತ್ಯ.
Advertisement
ಐಶ್ವರ್ಯ, ಕೀರ್ತಿ, ರೂಪಗಳನ್ನಿತ್ತು ಸಲಹುವ ಪುಷ್ಕರಣೀ ಆದ ಲಕ್ಷ್ಮೀ, ಕರಗಿಸಿದ ಚಿನ್ನದಂತಿರುವ ಮೈ ಬಣ್ಣವುಳ್ಳ ಪಿಂಗಲಾಂ ಅಂದರೆ ಕುಬೇರನಿಗೆ ಪಿಂಗ ಎಂದು ಕರೆಯುತ್ತಾರೆ; ಐಶ್ವರ್ಯವನ್ನು ನೀಡಿದ್ದರಿಂದ ಪಿಂಗಳಾ (ಲಾ=ದಾನ) ಸಮಸ್ತ ಜನರಿಗೂ ಸರ್ವ ಸಮೃದ್ಧಿ, ಸನ್ಮಂಗಳವನ್ನುಂಟು ಮಾಡಲಿ.
-ಜಲಂಚಾರು ರಘುಪತಿ ತಂತ್ರಿ, ಉಡುಪಿ