Advertisement

3 ನಿಮಿಷದಲ್ಲಿ 184 ಸೆಲ್ಫಿ: ಬಾಲಿವುಡ್‌ ಸೂಪರ್‌ಸ್ಟಾರ್‌ ಅಕ್ಷಯ್‌ ಕುಮಾರ್‌ ವಿಶ್ವ ದಾಖಲೆ

11:49 PM Feb 23, 2023 | Team Udayavani |

ಮುಂಬಯಿ: ಬಾಲಿವುಡ್‌ ಸೂಪರ್‌ಸ್ಟಾರ್‌ ಅಕ್ಷಯ್‌ ಕುಮಾರ್‌ ಮೂರು ನಿಮಿಷದಲ್ಲಿ 184 ಸೆಲ್ಫಿ ತೆಗೆದು ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ್ದಾರೆ.

Advertisement

ಅವರ ಮುಂದಿನ ಹಾಸ್ಯ ಸಿನೆಮಾ “ಸೆಲ್ಫಿ’ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಅವರು ಅಭಿಮಾನಿ­ಗಳೊಂದಿಗೆ ಸತತವಾಗಿ ಸೆಲ್ಫಿ ಪಡೆದುಕೊಂಡರು. ಈ ವೇಳೆ ಮೂರೇ ನಿಮಿಷದಲ್ಲಿ 184 ಸೆಲ್ಫಿಗಳಿಗೆ ಪೋಸ್‌ ನೀಡಿದರು, ಮಾತ್ರವಲ್ಲ ಅದರ ವೀಡಿಯೋ ತುಣು­ಕೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಪರಿಗಣಿಸಿದ ಗಿನ್ನೆಸ್‌ ಸದಸ್ಯರು ಅವರಿಗೆ ದಾಖಲೆ ಪ್ರಮಾಣಪತ್ರವನ್ನು ನೀಡಿ­ದರು.

ಇದೇ ವೇಳೆ ಸಂದರ್ಶನವೊಂದರಲ್ಲಿ ತಮ್ಮ ಕೆನಡಾ ಪಾಸ್‌ಪೋರ್ಟ್‌ ಕುರಿತು ಮಾತನಾಡಿದ ಅಕ್ಷಯ್‌, “ಭಾರತವೇ ನನ್ನ ಸರ್ವಸ್ವ. ನಾನು ಈಗಾಗಲೇ ಪಾಸ್‌ಪೋರ್ಟ್‌ ಬದಲಾವಣೆಗೆ ಅರ್ಜಿ ಹಾಕಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next