ಲಕ್ನೋ : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಅವರು 37 ಕೋಟಿ ರೂ ಆಸ್ತಿಪಾಸ್ತಿಯ ಒಡೆಯರು ಎಂಬ ಸಂಗತಿ ಅವರು ಸಲ್ಲಿಸಿರುವ ಚುನಾವಣಾ ಅಫಿದಾವಿತ್ ನಿಂದ ಬಹಿರಂಗವಾಗಿದೆ.
ಕುತೂಹಲದ ವಿಷಯವೆಂದರೆ 2017-18ರ ಹಣಕಾಸು ವರ್ಷದಲ್ಲಿ ಅಖೀಲೇಶ್ ಅವರ ಆದಾಯ ಕಡಿಮೆಯಾಗಿದೆ; ಆದರೆ ಅವರ ಪತ್ನಿ ಡಿಂಪಲ್ ಅವರ ಆದಾಯ ಹೆಚ್ಚಾಗಿದೆ.
ಅಖೀಲೇಶ್ ಅವರು ತಮ್ಮ ಚರಾಸ್ತಿ 7.9 ಕೋಟಿ ಮತ್ತು ಸ್ಥಿರಾಸ್ತಿ 16.90 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಪತ್ನಿ ಡಿಂಪಲ್ ಯಾದವ್ ಅವರು ತಮ್ಮ ಚರಾಸ್ತಿ 3.68 ಕೋಟಿ ಮತ್ತು ಸ್ಥಿರಾಸ್ತಿ 9.30 ಕೋಟಿ ಎಂದು ಹೇಳಿದ್ದಾರೆ.
ಕಳೆದ ಸಾಲಿಗಿಂತ ಈ ಸಾಲಿನಲ್ಲಿ 2013-14ರಲ್ಲಿ 1.25 ಕೋಟಿ ರೂ. ಇದ್ದ ಅಖೀಲೇಶ್ ಆದಾಯ 2017-18ರಲ್ಲಿ 84.83 ಲಕ್ಷ ರೂ ಕಡಿಮೆಯಾಗಿದೆ.
ಅಖೀಲೇಶ್ ಕೈಯಲ್ಲಿರುವ ನಗದು 3.91 ಲಕ್ಷ ಮತ್ತು ಆತನ ಪತ್ನಿ ಡಿಂಪಲ್ ಕೈಯಲ್ಲಿರುವ ನಗದು 4,03.743 ಎಂದು ಅಫಿದಾವಿತ್ ಹೇಳುತ್ತದೆ.