Advertisement

ಠಾಣಾಕುಶನೂರನಲ್ಲಿ ಅಖಂಡ ಹರಿನಾಮ-ಶಿವನಾಮ ಸಪ್ತಾಹ

03:12 PM Jun 16, 2018 | Team Udayavani |

ಕಮಲನಗರ: ಠಾಣಾಕುಶನೂರ ಗ್ರಾಮದ ಮಹಾದೇವ ಮಂದಿರದಲ್ಲಿ ಅಖಂಡ ಹರಿನಾಮ, ಶಿವನಾಮ  ಸಪ್ತಾಹ ಹಾಗೂ ಸೇವೆಯಿಂದ ನಿವೃತ್ತರಾದ ಶಿಕ್ಷಕ ರಘುನಾಥ ಶರಣಪ್ಪಾ ರೊಟ್ಟೆ ಅವರ ಸನ್ಮಾನ  ಸಮಾರಂಭ ನಡೆಯಿತು.

Advertisement

ಏಳು ನಗಳ ಕಾಲ ಪ್ರತಿನಿತ್ಯ 7ರಿಂದ 9 ಗಂಟೆ ವರೆಗೆ ಶಿವಲಿಲಾಮೃತ ಪಾರಾಯಣ, ಬೆಳಗ್ಗೆ 11ರಿಂದ 1
ಗಂಟೆ ವರೆಗೆ ಗಾಥಾ ಭಜನೆ, ಮಧ್ಯಾಹ್ನ 3ರಿಂದ 4ರ ವರೆಗೆ ಶಿವಭಜನೆ, ಪ್ರತಿದಿನ ಸಂಜೆ 5 ರಿಂದ 6ರ ವರೆಗೆ ಪ್ರವಚನ, ಸಂಜೆ 7ರಿಂದ 8ರ ವರೆಗೆ ಹರಿಪಠಣ, ರಾತ್ರಿ 9ರಿಂದ 11ರ ವರೆಗೆ ಹರಿ ಕೀರ್ತನೆ, ರಾತ್ರಿ ಹರಿಜಾಗರಣ ಹಾಗೂ ಬೆಳಗ್ಗೆ 5 ಗಂಟೆಗೆ ಕಾಕಡಾರತಿ ಕಾರ್ಯಕ್ರಮಗಳು ಜರುಗಿದವು.

ಏಳು ದಿನಗಳ ಕಾಲ ವಿವಿಧ ಮಹಾತ್ಮರು, ಶರಣರು, ಕೀರ್ತನೆಕಾರರು, ಪ್ರವಚನಕಾರರು, ಗಾಯಕರು ಹಾಗೂ ಸುಮಾರು 30 ಗ್ರಾಮಗಳಿಂದ ಶಿವ-ಹರಿ ಭಜನಾ ತಂಡಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ
ನಿವೃತ್ತ ಶಿಕ್ಷಕ ಹಾಗೂ ಈ ಕಾರ್ಯಕ್ರಮದ ರೂವಾರಿ ರಘುನಾಥ ಶರಣಪ್ಪಾ ರೊಟ್ಟೆ ದಂಪತಿಯನ್ನು ಗ್ರಾಮಸ್ಥರು ಸನ್ಮಾನಿಸಿದರು. 

ವಿರಕ್ತ ಮಠ, ಕನ್ನಡ ಸಾಹಿತ್ಯ ಪರಿಷತ್‌, ವಿವಿಧ ಸಂಘ ಸಂಸ್ಥೆ ಹಾಗೂ ಶಿಕ್ಷಕರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಈ ವೇಳೆ ಸಾನ್ನಿಧ್ಯ ವಹಿಸಿದ್ದ ಡಾ| ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಶಿಕ್ಷಕ ರಘುನಾಥ ರೊಟ್ಟೆ ಅವರು ತಮ್ಮ ಜೀವನ ಪರ್ಯಂತ ಮಕ್ಕಳಿಗೆ ಒಳ್ಳೆ ಪಾಠ, ಬೋಧನೆ ಮಾಡಿ ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿದ್ದಾರೆ. 

ಶಿಕ್ಷಕ ವೃತ್ತಿಯೊಂದಿಗೆ ಶರಣ ತತ್ವ, ಸಂತರ ತತ್ವಗಳನ್ನು ಕೀರ್ತನೆ ಮತ್ತು ಪ್ರವಚನಗಳ ಮೂಲಕ ಜನಜಾಗೃತಿಗೊಳಿಸಿದ್ದಾರೆ ಎಂದರು. ಶ್ರೀ ಮುರಲಿಧರ ಮಹಾರಾಜ, ಜಗನ್ನಾಥ ಮೂಲಗೆ ಮಾತನಾಡಿದರು.
ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.

Advertisement

ಶಿಕ್ಷಣ ಇಲಾಖೆ ಅಧಿಕಾರಿಗಳಾದ ಉಮಾಕಾಂತ ಮಹಾಜನ ವೇದಿಕೆಯಲ್ಲಿದ್ದರು. ಪ್ರವಿಣ ಕಾರಬಾರಿ, ಶಿವಕುಮಾರ ಸಜ್ಜನಶೆಟ್ಟೆ, ಜಗನ್ನಾಥ ಜಿರ್ಗೆ, ಸತೀಶ ಜಿರ್ಗೆ, ರಾಮದಾಸ ಮಾಸ್ಟರ್‌, ವಸಂತ ದೆಸಾಯಿ, ಶರಣಪ್ಪಾ ಬೆಲ್ದಾಳ, ಮಹಾದಪ್ಪಾ ಸಜ್ಜನಶೆಟ್ಟೆ, ಬಾಬುರಾವ್‌ ಜಾಧವ ಡಾ| ರವಿಂದ್ರ ಬಾವಗೆ, ಬಾಲಾಜಿ ವಾಗಮೊಡೆ, ರಮೇಶ ಬೊಚರೆ, ಸೋಪಾನ ಕೊರೆಕಲ ಇನ್ನಿತರರು ಇದ್ದರು. ಸಂಜು ಕದಂ ಸ್ವಾಗತಿಸಿದರು. ರಾಮಶೇಟ್ಟಿ ಪನ್ನಾಳೆ ನಿರೂಪಿಸಿದರು. ಬಾಲಾಜಿ ವಾಗಮೊಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next