Advertisement

ರೇಪ್‌ ಆರೋಪ ಸುಳ್ಳು; ಸಮ್ಮತಿಯ ಸೆಕ್ಸ್‌ ಸಂಬಂಧ ಇತ್ತು: MJ ಅಕ್‌ಬರ್‌

04:09 PM Nov 02, 2018 | udayavani editorial |

ಹೊಸದಿಲ್ಲಿ : ಮಾಜಿ ಕೇಂದ್ರ ಸಚಿವ ಎಂ ಜೆ ಅಕ್‌ಬರ್‌ ಅವರು ಅಮೆರಿಕದಲ್ಲಿ ಪತ್ರಕರ್ತೆಯಾಗಿರುವ ಭಾರತೀಯ ಮೂಲದ ಪಲ್ಲವಿ ಗೊಗೋಯ್‌ ತನ್ನ ವಿರುದ್ದ ಮಾಡಿರುವ ಅತ್ಯಾಚಾರ ಆರೋಪವನ್ನು ಅಲ್ಲಗಳೆದಿದ್ದಾರೆ.

Advertisement

“ನನ್ನ ಮತ್ತು ಆಕೆಯ (ಪಲ್ಲವಿ ಗೊಗೋಯ್‌) ನಡುವೆ ಹಲವು ತಿಂಗಳ ಕಾಲ ಪರಸ್ಪರ ಸಮ್ಮತಿಯ ಲೈಂಗಿಕ ಸಂಬಂಧ ಇತ್ತು; ಆದರೆ ಅದು ಕೊನೆಗೊಂಡಿತ್ತು; ಬಹುಷಃ ಅದಕ್ಕೆ ಅಷ್ಟೇನೂ ಒಳ್ಳೆಯ ಕಾರಣಗಳಿರಲಿಲ್ಲ’ ಎಂದು ಅಕ್‌ಬರ್‌ ಹೇಳಿದ್ದಾರೆ.

ಪ್ರತ್ಯೇಕ ಹೇಳಿಕೆಯೊಂದರಲ್ಲಿ ಅಕ್‌ಬರ್‌ ಅವರ ಪತ್ನಿ ಮಲ್ಲಿಕಾ ಅಕ್‌ಬರ್‌ ಅವರು, ವಾಷಿಂಗ್ಟನ್‌ ಪೋಸ್ಟ್‌ ಲೇಖನದಲ್ಲಿ ಪಲ್ಲವಿ ಗೊಗೋಯ್‌ ಮಾಡಿರುವ ಆರೋಪವನ್ನು ಅಲ್ಲಗಳೆದಿದ್ದಾರೆ. 

ಕೇಂದ್ರ ಸಚಿವ ಸಂಪುಟದಲ್ಲಿ ಸಹಾಯಕ ವಿದೇಶ ಸಚಿವರಾಗಿದ್ದ ಅಕ್‌ಬರ್‌ ಅವರು ಈಚೆಗೆ ತಮ್ಮ ವಿರುದ್ಧದ ಮೀ ಟೂ ಆರೋಪಗಳ ಒತ್ತಡಕ್ಕೆ ಮಣಿದು ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡಿದ್ದರು. 
 

Advertisement

Udayavani is now on Telegram. Click here to join our channel and stay updated with the latest news.

Next