ನೀವೇ ಕೇಳಿಕೊಳ್ಳಿ ಇನ್ನ, ಈ ಪ್ರಶ್ನೆಗಳನ್ನ!
Advertisement
ಬಹುಶಃ ಎÇÉಾ ತಾಯಂದಿರನ್ನು ಒಂದÇÉಾ ಒಂದು ದಿನ ಬಹುವಾಗಿ ಕಾಡಿದ ಪ್ರಶ್ನೆ ನಾನೂ ಒಬ್ಬ ದುಡಿಯುವ ಮಹಿಳೆಯಾಗಿದ್ದರೆ? ಏಕೆಂದರೆ ಮದುವೆಗೆ ಮೊದಲು ಆನಂತರ ಆರ್ಥಿಕವಾಗಿ ಸ್ವಾವಲಂಬಿಯಾದ ಮಹಿಳೆ ಮಕ್ಕಳಿಗಾಗಿ ಉದ್ಯೋಗವನ್ನು ತ್ಯಾಗ ಮಾಡಬೇಕಾಗಿ ಬಂದಾಗ ಒಂದು ಕ್ಷಣ ಶೂನ್ಯ ಅನ್ನಿಸಬಹುದು.ನಾವು ಕೂಡಿಟ್ಟ ಹಣ ಅಲ್ಪ ಸ್ವಲ್ಪ ಇದ್ದರೂ ಅದನ್ನು ಭವಿಷ್ಯ ಕ್ಕಾಗಿ ಕಾಯ್ದಿರಿಸಿ ಪ್ರತಿಯೊಂದು ಅವಶ್ಯಕತೆಗಳಿಗೂ ಪತಿಯನ್ನು ಅವಲಂಬಿಸಬೇಕಾದಾಗ ಮನಸ್ಸು ಒÇÉೆ ಎನ್ನುವುದು ಸಹಜ .ಆದರೂ ಅನಿವಾರ್ಯ ..
Related Articles
Advertisement
– ಬಿಡುವಿಲ್ಲದ ಕೆಲಸದ ನಡುವೆಯೇ ನಾನು ಕಂಡುಕೊಂಡ ಜೀವನದ ಉತ್ಸಾ ಹದ ಮೂಲ ನೆರೆಹೊರೆಯೊಂದಿಗಿನ ಒಡನಾಟ.ನಾವು ಮನೆಯಿಂದ ಹೊರಗೆ ಹೋಗಿ ಬೀದಿಗಿಳಿದು ಸಮಾಜಸೇವೆ ಮಾಡದಿದ್ದರೂ ನೆರೆಹೊರೆಯ ವೃದ್ದರಿಗೆ ಮಾಡುವ ಸಣ್ಣ ಪುಟ್ಟ ಸಹಾಯ ಮನಸ್ಸಿಗೆ ತುಂಬಾ ಖುಷಿ ಕೊಡುತ್ತದೆ. ನಮ್ಮ positive energyಯನ್ನು ವೃದ್ದಿಸುತ್ತದೆ. ಹಿರಿಯರಿಗೆ ಮೊಬೈಲ… ನಲ್ಲಿ ಸಿಲಿಂಡರ್ ಬುಕ್ ಮಾಡಿಕೊಡುವುದೋ, whatsapp skype ನಲ್ಲಿ ವಿದೇಶದಲ್ಲಿರುವ ಅವರ ಮಕ್ಕಳ ಜೊತೆ ಮಾತನಾಡಲು ಅವಕಾಶ ಮಾಡಿಕೊಡುವುದೋ ಅಥವಾ ಓಲಾ ಕ್ಯಾಬ… ಬುಕ್ ಮಾಡಿಕೊಡುವುದೋ ಹೀಗೆ ಸಣ್ಣ ಪುಟ್ಟ ಸಹಾಯ ಮಾಡಿದಾಗ ನಮಗೆ ಅರಿವಿಲ್ಲದಂತೆಯೇ ನಮ್ಮ ಮನಸ್ಸು ಪ್ರಫುಲ್ಲವಾಗಿರುತ್ತದೆ. ನಮ್ಮಿಂದ ಒಂದು ಹಿರಿಯ ಜೀವದ ಮುಖದಲ್ಲಿ ಕೃತಜ್ಞತೆಯ ಮುಗುಳ್ನಗೆ ಕಂಡರೆ ದೂರದಲ್ಲಿರುವ ನಮ್ಮ ಅಪ್ಪ ಅಮ್ಮ ಹೀಗೆ ಯಾರಿಂದಲೋ ಸಹಾಯ ಪಡೆದಿರುತ್ತಾರೆ ಎಂಬ ಸಮಾಧಾನ. ನನ್ನಿಂದ ನನ್ನ ಗಂಡ ಮಕ್ಕಳ ಹೊರತಾಗಿ ಸಹಾಯ ಪಡೆದವರು ನಮ್ಮನ್ನು ಹಾರೈಸಿದಾಗ ನಾನು ಜಸ್ಟ… housewife ಅನ್ನುವ ಭಾವನೆ ಹೊರಟುಹೋಗಿರುತ್ತದೆ.
– ಜೀವನವೆಂದರೆ ತಿರುಗು, ತಿನ್ನು, ಫೇಸುºಕ್ ನಿಂದ ಪ್ರಪಂಚಕ್ಕೆÇÉಾ ಗೊತ್ತುಮಾಡು ಎಂಬ ಭ್ರಮೆಯಿಂದ ಹೊರಬರುವುದು .ಹೆಚ್ಚಿನ ಸಣ್ಣ ಮಕ್ಕಳ ತಾಯಂದಿರು ಕೊರಗುವುದು ಇದೇ ಭ್ರಮೆಗೊಳಗಾಗಿ.
– ಸಮಾಜ ಬದಲಾದಂತೆ ಅವರೂ ಬದಲಾಗಿ¨ªಾರೆ .ಗಂಡಸರನ್ನು ಯಾವಾಗಲೂ ದೂರುವ ಮೊದಲು ಒಮ್ಮೆ ಯೋಚಿಸಿನೋಡಿ .ಹಿಂದಿನ ಕಾಲಕ್ಕೆ ಹೋಲಿಸಿದಲ್ಲಿ ಈಗಿನ ಉದ್ಯೋಗಸ್ಥ ಗಂಡಸರೂ ಕೂಡ ಮಗುವಿನ ಲಾಲನೆ ಪಾಲನೆಯ ಭಾಗವಾಗಿರುವುದು .ಒಂದು ಕಾಲವಿತ್ತು ನಮ್ಮ ಅಮ್ಮಮ್ಮನ ಜಮಾನ ,ಗಂಡಸರು ಮಕ್ಕಳನ್ನು ಸ್ನಾನ ಮಾಡಿಸುವುದಾಗಲಿ ,ಮಲಗಿಸುವುದಾಗಲಿ ಬಹುದೂರದ ಮಾತಾಗಿತ್ತು .ಆದರೆ ಈಗಿನ ಗಂಡಸರು ಮಕ್ಕಳ ಡಯಾಪರ… ಬದಲಿಸುವುದರಲ್ಲೂ ,ಸ್ವತಂತ್ರ ವಾಗಿ ಸಣ್ಣ ಶಿಶುಗಳ ಸ್ನಾನ ಮಾಡಿಸುವುದರಲ್ಲೂ ಪರಿಣಿತರಾಗಿ¨ªಾರೆ.ಇದೇ ಹದಿನೈದೋ ಇಪ್ಪತ್ತೋ ವರ್ಷದ ಹಿಂದಾಗಿದ್ದರೆ ನಾವು ಸೋಮಾರಿ ಹುಡುಗಿ ಪಟ್ಟ ಕಟ್ಟಿಕೊಳ್ಬೇಕಾಗಿತ್ತು .
ಅದ್ದರಿಂದ ಸ್ವಲ ಮಟ್ಟಿಗೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡರೆ ನಾನು ಗೃಹಿಣಿ ನಾನು ಮನೆಯ ಒಳಗೆ ಮಾತ್ರ ದುಡಿಯುವವಳು ನನಗೆ ಅರ್ಥಿಕ ಸ್ವಾತಂತ್ರ್ಯ ಇಲ್ಲ ಎನ್ನುವ ಅಭದ್ರತಾ ಭಾವ ದೂರವಾಗಬಹುದು.ಆಗಾಗ ,ನಾವು ನೋವು ತಿಂದು ಮಗುವಿಗೆ ಜನ್ಮ ಕೊಟ್ಟು ಮಗು ಅತ್ತು ನಾವು ನಕ್ಕ ಕ್ಷಣ ಮೆಲುಕು ಹಾಕುತ್ತಿದ್ದರೆ ,ಮಕ್ಕಳ ಬಾಲ್ಯದ ಫೋಟೋ ,ವಿಡಿಯೋ ನಮ್ಮ ಬಿಡುವಿನ ಸಮಯಕ್ಕೆ snacks ಆದರೆ ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳಬಹುದು.ಇಲ್ಲದಿದ್ದರೆ ಖನ್ನತೆಗೊಳಗಾಗಿ ಬುದ್ದಿ ಹೇಳಿಸಿಕೊಳ್ಳಲು ಚಿಕ್ಕಪ್ಪನೋ, ಸೋದರಮಾವನೋ, ಯಾರೋ ಆಪ್ತಸಲಹೆಗಾರರನ್ನೋ ಅವಲಂಬಿಸಬೇಕಾದೀತು!
-ವಿದ್ಯಾ ಹೊಸಕೊಪ್