Advertisement

ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಚಂದ್ರನ ಅಂಗಳದಲ್ಲಿ ಜಮೀನು “ಗಿಫ್ಟ್’ನೀಡಿದ ಪತಿ

04:54 PM Dec 28, 2020 | sudhir |

ಜೈಪುರ: ಮದುವೆ ವಾರ್ಷಿಕೋತ್ಸವಕ್ಕೆ ಪತಿ ತನ್ನ ಪತ್ನಿಗೆ ವಿವಿಧ ರೀತಿಯ ಉಡುಗೊರೆ ನೀಡುವುದು ಗೊತ್ತೇ ಇದೆ ಆದರೆ ಇಲ್ಲೊಬ ವ್ಯಕ್ತಿ ತನ್ನ ಮದುವೆಯ ಎಂಟನೇ ವರ್ಷದ ಸಂಭ್ರಮಕ್ಕೆ ಚಂದ್ರನ ಅಂಗಳದಲ್ಲಿ ಬರೋಬ್ಬರಿ ಮೂರು ಎಕರೆ ಜಮೀನು ಉಡುಗೊರೆಯಾಗಿ ನೀಡಿದ್ದಾನೆ.

Advertisement

ರಾಜಸ್ಥಾನದ ಅಜ್ಮೀರ್ ‌ನ ಧರ್ಮೇಂದ್ರ ಅನಿಜಾ ಎಂಬ ವ್ಯಕ್ತಿ ತನ್ನ ಪತ್ನಿ ಸ್ವಪ್ನಾಗೆ ಚಂದ್ರನ ಅಂಗಳಲ್ಲಿ 3 ಎಕರೆ ಜಮೀನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಎಂಟನೇ ವಾರ್ಷಿಕೋತ್ಸವಕ್ಕೆ ಪತ್ನಿಗೆ ವಿಶೇಷ ಉಡುಗೊರೆ ನೀಡಲು ಇಚ್ಛಿಸಿದ್ದೆ. ಕಳೆದ ಡಿಸೆಂಬರ್ 24 ರಂದು ನಮ್ಮ ವಿವಾಹ ವಾರ್ಷಿಕೋತ್ಸವವಾಗಿತ್ತು. ಪ್ರತಿಯೊಬ್ಬರೂ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಕಾರುಗಳು, ಆಭರಣ ಅಥವಾ ಅವರವರ ಸ್ಥಿತಿಗತಿಗೆ ತಕ್ಕಂತೆ ಉಡುಗೊರೆ ನೀಡುತ್ತಾರೆ ಆದರೆ ನಾನು ನನ್ನ ಪತ್ನಿಗೆ ಏನಾದರೂ ವಿಶೇಷವಾದ ಉಡುಗೊರೆ ನೀಡಲು ಬಯಸಿದ್ದೆ. ಆದ್ದರಿಂದ, ನಾನು ಅವಳಿಗೆ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದೆ, ”ಎಂದು ಅನಿಜಾ ಹೇಳಿದ್ದಾರೆ.

ಇದನ್ನೂ ಓದಿ:ಬ್ರಿಟಿಷ್ ರಿಗೆ ಮುಚ್ಚಳಿಕೆ ಬರೆದುಕೊಟ್ಟ ಬಿಜೆಪಿಯವರದ್ದು ದೇಶ ಭಕ್ತಿಯಾ? ಸಿದ್ದರಾಮಯ್ಯ

“ನನಗೆ ತುಂಬಾ ಸಂತೋಷವಾಗಿದೆ. ಅವರು ನನಗೆ ಇಷ್ಟೊಂದು ವಿಶೇಷವಾದ ಉಡುಗೊರೆ ನೀಡುತ್ತಾರೆಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ.  ವಿವಾಹ ವಾರ್ಷಿಕೋತ್ಸವಕ್ಕೆ ಪತಿ ದೊಡ್ಡ ಮಟ್ಟದಲ್ಲಿ ಪಾರ್ಟಿ ವ್ಯವಸ್ಥೆ ಮಾಡಿದ್ದರು ಅದೇ ಸಮಯದಲ್ಲಿ ಉಡುಗೊರೆಯಾಗಿ ಆಸ್ತಿಯ ಪತ್ರಗಳನ್ನು ನೀಡಿದ್ದಾರೆ ಎಂದು ಪತ್ನಿ ಸ್ವಪ್ನಾ ಸಂತೋಷ ಹಂಚಿಕೊಂಡರು.

Advertisement

ಅಮೆರಿಕದ ನ್ಯೂಯಾರ್ಕ್ ನಗರದ ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಸಂಸ್ಥೆಯ ಮೂಲಕ ಧರ್ಮೇಂದ್ರ ಈ ಭೂಮಿಯನ್ನು ಖರೀದಿಸಿದ್ದಾರೆ. ಅದನ್ನು ಖರೀದಿಸುವ ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ತೆಗೆದುಕೊಳ್ಳಬಹುದು ಎಂದಿದ್ದಾರೆ.

ಚಂದ್ರನ ಮೇಲೆ ಭೂಮಿ ಖರೀದಿಸಿದವರಲ್ಲಿ ರಾಜಸ್ಥಾನದಲ್ಲಿ ನಾನೇ ಮೊದಲು ಎಂಬ ಖುಷಿಯೂ ಇದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next