Advertisement

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

01:44 AM Jun 15, 2021 | Team Udayavani |

ಮುಂಬಯಿ : ಭಾರತದ ವನಿತೆಯರು 7 ವರ್ಷಗಳ ಬಳಿಕ ಟೆಸ್ಟ್‌ ಪಂದ್ಯವೊಂದನ್ನು ಆಡಲಿದ್ದು, ಈಗಾಗಲೇ ಇಂಗ್ಲೆಂಡ್‌ ತಲುಪಿದ್ದಾರೆ. ಇದಕ್ಕೂ ಮೊದಲು ಮುಂಬಯಿಯಲ್ಲಿ ಕ್ವಾರಂಟೈನ್‌ನಲ್ಲಿದ್ದಾಗ ಮಿಥಾಲಿ ರಾಜ್‌ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಟಿಪ್ಸ್‌ ನೀಡಿದ್ದಾರೆ ಎಂಬ ಸಂಗತಿ ತಿಳಿದು ಬಂದಿದೆ.

Advertisement

ವನಿತಾ ತಂಡದ ಕೋಚ್‌ ರಮೇಶ್‌ ಪೊವಾರ್‌ ಅವರ ವಿನಂತಿ ಮೇರೆಗೆ ರಹಾನೆ ವನಿತಾ ಕ್ರಿಕೆಟಿಗರಿಗೆ ಬ್ಯಾಟಿಂಗ್‌ ಸಲಹೆ ಸೂಚನೆ ನೀಡಿದರು ಎಂದು ಹಿರಿಯ ಕ್ರಿಕೆಟ್‌ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

“ರಮೇಶ್‌ ಪೊವಾರ್‌ ಮತ್ತು ಅಜಿಂಕ್ಯ ರಹಾನೆ ಇಬ್ಬರೂ ಮುಂಬಯಿ ಪರ ಒಟ್ಟಿಗೇ ಆಡಿದವರು. ವನಿತೆಯರು ಏಳು ವರ್ಷಗಳ ಬಳಿಕ ಟೆಸ್ಟ್‌ ಆಡಲಿಳಿಯುವುದರಿಂದ ಅವರಿಗೆ ಹೆಚ್ಚಿನ ಮಾರ್ಗದರ್ಶನದ ಅಗತ್ಯವಿದೆ. ಹೀಗಾಗಿ ರಹಾನೆ ಅವರ ಮೂಲಕ ಬ್ಯಾಟಿಂಗ್‌ ಟಿಪ್ಸ್‌ ನೀಡಲಾಯಿತು’ ಎಂದು ಅಧಿಕಾರಿ ಹೇಳಿದ್ದಾರೆ.

ರಹಾನೆ ವನಿತಾ ಕ್ರಿಕೆಟಿಗರಿಗೆ 50 ನಿಮಿಷಗಳ ತರಬೇತಿ ನೀಡಿದರು. ನಾಯಕಿ ಮಿಥಾಲಿ, ಮಂಧನಾ, ಹರ್ಮನ್‌ಪ್ರೀತ್‌ ಸೇರಿದಂತೆ ಎಲ್ಲ ಬ್ಯಾಟ್ಸ್‌ಮನ್‌ಗಳು ರಹಾನೆ ಅವರಿಂದ ಮಾರ್ಗದರ್ಶನ ಪಡೆದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next