ಮುಂಬಯಿ: ನ್ಯೂಜಿಲ್ಯಾಂಡ್ ಸ್ಪಿನ್ ಬೌಲರ್ ಅಜಾಜ್ ಪಟೇಲ್ ಮುಂಬಯಿ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಒಂದರ ಎಲ್ಲ 10 ವಿಕೆಟ್ ಉರುಳಿಸಿದ್ದು ಈಗ ಇತಿಹಾಸ. ಇದಕ್ಕೆ ಕಾರಣವಾದ ಚೆಂಡನ್ನು ಅವರು ಮುಂಬಯಿ ಕ್ರಿಕೆಟ್ ಸಂಸ್ಥೆಯ (ಎಂಸಿಎ) ವಸ್ತುಸಂಗ್ರಹಾಲಯಕ್ಕೆ ನೀಡಿದ್ದಾರೆ.
ಇಲ್ಲಿ ವಿಶೇಷ ಸ್ಥಾನಮಾನದೊಂದಿಗೆ ಈ ಚೆಂಡನ್ನು ಇರಿಸಲಾಗುವುದು ಎಂದು ಎಂಸಿಎ ಅಧ್ಯಕ್ಷ ವಿಜಯ್ ಪಾಟೀಲ್ ತಿಳಿಸಿದ್ದಾರೆ.
“ಅಜಾಜ್ ಪಟೇಲ್ ಸಾಧನೆ ಅಮೋಘವಾದದ್ದು. ವಾಂಖೇಡೆ ಕ್ರೀಡಾಂಗಣದ ಗರಿಮೆಯಾಗಿ ಈ ಸಾಧನೆ ಸೇರ್ಪಡೆಗೊಂಡಿದೆ.
“ಪ್ರೈಡ್ ಆಫ್ ದ ಪ್ಲೇಸ್’ ಗೌರವದೊಂದಿಗೆ ಆ ಚೆಂಡನ್ನು ಇಲ್ಲಿ ಕಾಪಿಡಲಾಗುವುದು. ಭವಿಷ್ಯದ ಆಟಗಾರರಿಗೆ ಇದು ಪ್ರೇರಣೆಯಾಗಲಿದೆ’ ಎಂದು ಪಾಟೀಲ್ ಹೇಳಿದರು.
ಇದನ್ನೂ ಓದಿ:ಸುಖೇಶ್ ಚಂದ್ರಶೇಖರ್ ಪತ್ನಿಯೇ ಮಾಸ್ಟರ್ ಮೈಂಡ್!