Advertisement

ಅಜೇಯ್‌ ಈಗ “ಶೋಕಿವಾಲ’

11:50 AM Sep 08, 2019 | Lakshmi GovindaRaju |

“ಚಮಕ್‌’ ಹಾಗು “ಅಯೋಗ್ಯ’ ಚಿತ್ರ ನಿರ್ಮಿಸಿದ್ದ ಟಿ.ಆರ್‌.ಚಂದ್ರಶೇಖರ್‌, ತಮ್ಮ ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ಅಜೇಯ್‌ರಾವ್‌ ಅವರ ಚಿತ್ರ ನಿರ್ಮಾಣ ಮಾಡುತ್ತಿರುವ ಹಾಗೂ ಆ ಚಿತ್ರದಲ್ಲಿ ಹೊಸ ಹುಡುಗಿ ಸಂಜನಾ ನಾಯಕಿಯಾಗಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು.

Advertisement

ತಿಮ್ಮೇಗೌಡ ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಟೈಟಲ್‌ ಆಗಿರಲಿಲ್ಲ. ಈಗ ಚಿತ್ರಕ್ಕೆ ಟೈಟಲ್‌ ಆಗಿದೆ. ಅದು “ಶೋಕಿವಾಲ’. ಹೌದು, ಅಜೇಯ್‌ ರಾವ್‌ ಚಿತ್ರಕ್ಕೆ “ಶೋಕಿವಾಲ’ ಎಂದು ಟೈಟಲ್‌ ಇಡಲಾಗಿದೆ. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ಇದು ಏಳನೇ ಸಿನಿಮಾವಾದರೆ, ಅಜೇಯ್‌ರಾವ್‌ ಅವರಿಗೆ ಇದು 27 ನೇ ಚಿತ್ರ. ನಿರ್ದೇಶಕ ತಿಮ್ಮೇಗೌಡ ಅವರಿಗೆ ಮೊದಲ ಸಿನಿಮಾ.

ಇದೊಂದು ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆ. ಈಗಾಗಲೇ ಶೇ% 75 ರಷ್ಟು ಚಿತ್ರೀಕರಣ ಮುಗಿದಿದ್ದು, ಮಂಡ್ಯ, ಚನ್ನಪಟ್ಟಣ್ಣ, ಮದ್ದೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರಕ್ಕೆ ಶ್ರೀಧರ್‌ ವಿ.ಸಂಭ್ರಮ್‌ ಸಂಗೀತ, ಶಿವುಸೀನ ಛಾಯಾಗ್ರಹಣವಿದೆ. ಪ್ರಶಾಂತ್‌ ರಾಜಪ್ಪ ಸಂಭಾಷಣೆ ಬರೆದರೆ ಕೆ.ಎಂ.ಪ್ರಕಾಶ್‌ ಅವರು ಸಂಕಲನ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next