Advertisement
ವಿವಿಧ ಕ್ಷೇತ್ರದ ಗಣ್ಯರು ಕಾರ್ಯ ಕ್ರಮದಲ್ಲಿ ಭಾಗವಹಿಸಿ, ಮನೋಹರ ಪ್ರಸಾದ್ ಅವರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. ಉದ್ಯಮಿ ಶ್ರೀನಾಥ್ ಹೆಬ್ಟಾರ್ ಸಹಿತ ಕುಟುಂಬ ಸದಸ್ಯರು ಭಾಗವಹಿಸಿದ್ದರು.
Related Articles
Advertisement
ಹಿರಿಯ ಸಾಹಿತಿ ಪ್ರೊ|ಬಿ.ಎ. ವಿವೇಕ ರೈ ತಮ್ಮೊಂದಿಗಿನ ಸಂಬಂಧವನ್ನು ನೆನಪಿಸಿಕೊಂಡು, ಮನುಷ್ಯ ಪ್ರೀತಿ ಬೆಳೆಸಿಕೊಂಡಿದ್ದ “ಎಂಪಿ’ ಅವರು ಅಧ್ಯಯನಶೀಲತೆಯ ಮೂಲಕವೇ ಹೆಸರು ಪಡೆದವರು. ಶುದ್ಧತೆ ಹಾಗೂ ಸಮಗ್ರತೆ ಹೊಂದಿದ್ದ ಅವರ ಬರಹಗಳು ಅಚ್ಚುಕಟ್ಟುತನ ಹೊಂದಿದ್ದವು ಎಂದರು.
ವೈದ್ಯ ಡಾ|ನರಸಿಂಹ ಪೈ ಅವರು ಮಾತನಾಡಿ, ಮನೋಹರ ಪ್ರಸಾದ್ ಕೇವಲ ಪತ್ರಕರ್ತ ಮಾತ್ರವಲ್ಲ. ಸರ್ವ ವಿಷಯಗಳಲ್ಲಿಯೂ ಪರಿಣತಿ ಹೊಂದಿದ್ದ ಶ್ರೇಷ್ಠ ವ್ಯಕ್ತಿ ಎಂದರು.
ಪತ್ರಕರ್ತ ಪಿ.ಬಿ. ಹರೀಶ್ ರೈ ಅವರು ಮಾತನಾಡಿ, ಕಿರಿಯರಿಗೆ ಸದಾ ಬರೆಯಲು ಪ್ರೋತ್ಸಾಹಿಸುತ್ತಿದ್ದ ಅವರು, ಕೊನೆಯವರೆಗೂ ವಿದ್ಯಾರ್ಥಿಯಾಗಿಯೇ ಇದ್ದರು. ಅವರದ್ದು ಪತ್ರಿಕೋದ್ಯಮದಲ್ಲಿ ಶಾಶ್ವತ ಹೆಸರು ಎಂದರು. ರಾಜೇಶ್ ಕೆ.ಸಿ. ಕಾರ್ಯಕ್ರಮ ನಿರ್ವಹಿಸಿದರು. ನೂರಾರು ಮಂದಿ ಸಾರ್ವಜನಿಕರು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಸ್ಫೂರ್ತಿಯ ಬದುಕು ಸದಾ ಹಸುರುಮನೋಹರ ಪ್ರಸಾದ್ ಅವರು ಉದಯವಾಣಿ ಕುಟುಂಬದ ಸದಸ್ಯರಾಗಿ 36 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಅದ್ಭುತ ಸ್ಮರಣ ಶಕ್ತಿ ಹೊಂದಿದ್ದ ಅವರು ಜನಪರ ಬರಹಗಳ ಮೂಲಕ ಗುರುತಿಸಿಕೊಂಡು ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸಿದ್ದಾರೆ. ಕಿರಿಯರಿಗೆ ಮಾರ್ಗದರ್ಶಕರಾಗಿದ್ದ ಮನೋಹರ ಪ್ರಸಾದ್ ಈಗ ಇಲ್ಲವಾದರೂ ಅವರ ಸ್ಫೂರ್ತಿಯ ಬದುಕು ನಮ್ಮ ಜತೆಗೆ ಸದಾ ಹಸುರಾಗಿರುತ್ತದೆ ಎಂದು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ.ನ ಎಂಡಿ ಹಾಗೂ ಸಿಇಒ ವಿನೋದ್ ಕುಮಾರ್ ಅಭಿಪ್ರಾಯಪಟ್ಟರು.