Advertisement

‘ಮೈಲಾಪುರ’ದಲ್ಲಿ ರಿಯಾಲಿಟಿ ಶೋ

09:59 AM Mar 14, 2021 | Team Udayavani |

“ಮೈಲಾಪುರ’ ಎಂಬ ಸಿನಿಮಾವೊಂದು ಆರಂಭವಾಗಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಹಿರಿಯ ಸಂಗೀತ ನಿರ್ದೇಶಕ ರಾಜನ್‌ ನಾಗೇಂದ್ರ ಖ್ಯಾತಿಯ ನಾಗೇಂದ್ರ ಅವರ ಪತ್ನಿ ಜಯಲಕ್ಷ್ಮೀ ಹಾಗೂ ಸಾಲುಮರದ ತಿಮ್ಮಕ್ಕ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

Advertisement

ಅಂತರಿಕ್ಷ ವಿ. ಅವರ ನಿರ್ಮಾಣದ ಈ ಚಿತ್ರದಲ್ಲಿ ರಿಯಾಲಿಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆಯೋ ಕಥಾನಕವಿದೆ. ಫ‌ಣೀಶ್‌ ಈ ಚಿತ್ರದ ನಿರ್ದೇಶಕರು.

ಇದನ್ನೂ ಓದಿ:ಮಾ.15ಕ್ಕೆ ಭಜರಂಗಿ 2 ಲಿರಿಕಲ್‌ ವಿಡಿಯೋ ರಿಲೀಸ್

ಈ ಸಂದರ್ಭದಲ್ಲಿ ಮಾತನಾಡಿದ ಫ‌ಣೀಶ್‌ ನಿರ್ಮಾಪಕರು ನನಗೆ ನಾರ್ಮಲ್‌ ಕಥೆ ಬಿಟ್ಟು ಬೇರೆಯದೆ ಕಂಟೆಂಟ್‌ ಇಟ್ಟುಕೊಂಡು ಚಿತ್ರ ಮಾಡೋಣ ಎಂದು ಹೇಳಿದರು. ಒಂದು ರಿಯಾಲಿಟಿ ಷೋ ಬೇಸ್‌ ಮಾಡಿಕೊಂಡು ಚಿತ್ರ ಮಾಡಿದ್ದೇವೆ. ಚಿತ್ರದಲ್ಲಿ ಅಮ್ಮ ಮಗಳ ಕಥೆಯೂ ಇದೆ. ಬೇಲೂರು, ಮಂಗಳುರು. ಬೆಂಗಳೂರು ಹಾಗೂ ಮಂಡ್ಯ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ನಾಯಕಿ ತನಗೆ ಗೊತ್ತಿಲ್ಲದೆ ರಿಯಾಲಿಟಿ ಷೋನಲ್ಲಿ ಪಾಲ್ಗೊಂಡಾಗ ಈ ಮೈಲಾಪುರವನ್ನು ಆಯ್ಕೆ ಮಾಡಿಕೊಂಡಿರುತ್ತಾಳೆ. ಅಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತು ಎಂದು ಹೇಳಿದರು.

ಈ ಚಿತ್ರದಲ್ಲಿ ನಟ ಭರತ್‌ ಕುಮಾರ್‌ ಲವ್‌ ಫೇಲ್ಯೂರ್‌ ಆದ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿಯಾಗಿ ನಟಿ ಐಶ್ವರ್ಯ ಸಿಂಧೋಗಿ ಹಾಗೂ ವಿಶೇಷ ಪಾತ್ರದಲ್ಲಿ ನಿಧಿ ಸುಬ್ಬಯ್ಯ ಅವರು ಕಾಣಿಸಿಕೊಂಡಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next