Advertisement

‘ಎಂಗೇಜ್ಮೆಂಟ್‌’ ಎಂದ ಐಶ್ವರ್ಯಾ ಗೌಡ

12:21 PM May 07, 2023 | Team Udayavani |

ಇತ್ತೀಚೆಗೆ ಬಿಡುಗಡೆಯಾದ “ಪ್ರವೀಣ’ ಚಿತ್ರದಲ್ಲಿ ತಮ್ಮ ಅಭಿನಯದಿಂದ ಸಿನಿಪ್ರಿಯರ ಗಮನ ಸೆಳೆದ ನಟಿ ಐಶ್ವರ್ಯಾ ಗೌಡ, ಇದೀಗ “ಬೋನ ಗಾನಿ ಎಂಟರ್‌ಟೈನ್ಮೆಂಟ್ಸ್‌’ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ “ಎಂಗೇಜ್ಮೆಂಟ್‌’ ಎಂಬ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Advertisement

ನಿಖೀಲ್‌ ಕುಮಾರ್‌ ಅಭಿನಯದ “ಜಾಗ್ವಾರ್‌’ ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಐಶ್ವರ್ಯಾ, “ಪ್ರವೀಣ’ ಚಿತ್ರದಲ್ಲಿ ನಟಿಸಿದರು. ಆ ನಂತರ ರಾಜು ಬೋನಗಾನಿ ನಿರ್ದೇಶನದ ಪ್ಯಾನ್‌ ಇಂಡಿಯಾ ಚಿತ್ರ “ರೇವ್‌ ಪಾರ್ಟಿ’ಯಲ್ಲಿ ದ್ವಿತೀಯ ನಾಯಕಿಯಾಗಿ ಅಭಿನಯಿಸಿದರು. ಇಂದಿನ ಯುವಜನತೆ ಡ್ರಗ್ಸ್‌ ಹೇಗೆ ದಾಸರಾಗುತ್ತಿದ್ದಾರೆ ಎಂದು ಸಾರುವ ಈ ಚಿತ್ರ ಬಿಡುಗಡೆ ಆಗುವುದಕ್ಕಿಂತ ಮೊದಲೇ, ಅದೇ ನಿರ್ದೇಶಕರ ಇನ್ನೊಂದು ಪ್ಯಾನ್‌ ಇಂಡಿಯಾ ಚಿತ್ರವಾದ “ಎಂಗೇಜ್ಮೆಂಟ್‌’ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸದ್ಯ “ಎಂಗೇಜ್ಮೆಂಟ್‌’ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next