Advertisement

ಏರ್‌ಟೆಲ್‌ ಪ್ರಿ-ಪೇಯ್ಡ್ ಶುಲ್ಕ ಶೇ.25ರ ವರೆಗೆ ಏರಿಕೆ

06:45 PM Nov 22, 2021 | Team Udayavani |

ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಸೇವೆಗಳನ್ನೊದಗಿಸುವ ಕಂಪನಿ ಭಾರ್ತಿ ಏರ್‌ಟೆಲ್‌ ಶೇ.20-ಶೇ.25ರಷ್ಟು ದರ ಹೆಚ್ಚಳ ಮಾಡಿದೆ.

Advertisement

ಇದು ವಿವಿಧ ರೀತಿಯ ಪ್ರಿ-ಪೇಯ್ಡ್, ಡೇಟಾ ಟಾಪ್‌-ಅಪ್‌, ವಾಯ್ಸ್ ಪ್ಲಾನ್‌ಗಳು ಸೇರಿದಂತೆ ಹಲವು ಸೌಲಭ್ಯಗಳಿಗೆ ಇದು ಅನ್ವಯವಾಗಲಿದೆ.

ನ.26ರಿಂದ ಹೊಸ ದರ ಜಾರಿಯಾಗಲಿದೆ. ಆರಂಭಿಕ ವಾಯ್ಸ್ ಪ್ಲಾನ್‌ನ ದರವನ್ನು ಶೇ.25ರಷ್ಟು ಏರಿಕೆ ಮಾಡಲಾಗಿದೆ.

ಅನಿಯಮಿತವಾಗಿರುವ ವಾಯ್ಸ್ ಪ್ಲಾನ್‌ ದರವನ್ನು ಶೇ.20ರಷ್ಟು ಏರಿಕೆ ಮಾಡಲಾಗಿದೆ. ಇದರಿಂದಾಗಿ ಆರಂಭಿಕ ಹೊಸ ದರ 79 ರೂ. ಇದ್ದದ್ದು 99 ರೂ.ಗಳಿಗೆ ಏರಿಕೆಯಾಗಿದೆ.

ಇದನ್ನೂ ಓದಿ:ತೀವ್ರ ವಿರೋಧಕ್ಕೆ ಮಣಿದ ಆಂಧ್ರಪ್ರದೇಶ ಸಿಎಂ; ವಿವಾದಿತ 3 ರಾಜಧಾನಿಗಳ ಮಸೂದೆ ವಾಪಸ್

Advertisement

ಅಂದರೆ ಶೇ.25.3ರಷ್ಟು ಏರಿಕೆಯಾಗಿದೆ. ಅದಕ್ಕೆ 28 ದಿನಗಳ ವಾಯಿದೆ ಇರಲಿದೆ. ಶೇ.50ರಷ್ಟು ಟಾಕ್‌ಟೈಮ್‌, 200 ಎಂಬಿ ಡೇಟಾ, ಪ್ರತಿ ಸೆಕೆಂಡಿಗೆ 1 ಪೈಸೆ ವಾಯ್ಸ್ ಗೆ ಶುಲ್ಕ ವಿಧಿಸಲಾಗುತ್ತದೆ.

ಇದೇ ಮೊದಲ ಬಾರಿಗೆ ಏರ್‌ಟೆಲ್‌ ಈ ಮಾದರಿಯಲ್ಲಿ ದರ ಏರಿಕೆ ಮಾಡುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next