ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತನೇ ವಾರ್ಷಿಕೋತ್ಸವ ಅಂಗವಾಗಿ ಏರ್‌ಪೋರ್ಟ್ ಹಬ್ಬ ಭಾನುವಾರ ಅದ್ಧೂರಿಯಾಗಿ ನಡೆಯಿತು.
ನಿಲ್ದಾಣದ ಹಜ್ ಟರ್ಮಿನಲ್ ಆವರಣದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ, ವಿದೇಶಗಳ ಖ್ಯಾತ ಗಾಯಕರು, ಕಲಾವಿದರು ಹಾಡಿ, ಕುಣಿದು ಪ್ರಯಾಣಿಕರನ್ನು ರಂಜಿಸಿದರು. ಆಹಾರ ಮತ್ತು ಪಾನೀಯ ಮಳಿಗೆಗಳು, ಮಕ್ಕಳ ವಲಯ, ಗೇಮಿಂಗ್ ವಿಭಾಗ, ಮತ್ತು ಚಿಲ್ಲಿಂಗ್ ವಲಯಗಳು ಪ್ರವಾಸಿಗರ ಮನಸೆಳೆದವು.
ಗಾಯಕ ಶಾನ್, ಡಿಜೆ ಜಸ್ ಮೀತ್, ಪರ್ಯಾಯ ರಾಕ್ ಬ್ಯಾಂಡ್, ಕಾಲ್ಪನಿಕ್ ಥಿಯರಿ, ಜಂಬೆ ಕಲೆಕ್ಟ್ರಿವ್, ಗಾಯಕ, ಬರಹಗಾರರ ಲೊಯಸುಂ, ಬೆಂಗ್ಳೂರು ಮೂಲದ ಸಾಗರ್ ಶಾಸ್ರೀ ತಂಡ, ಅರ್ಟಿಸನಾಟೋ, ಪಲ್ಸೊ, ಬೆಂಗಳೂರು ರಾಕ್ ಬ್ಯಾಂಡ್‌ಗಳು ಪ್ರಮುಖ ಆಕರ್ಷಣೆಯಾಗಿದ್ದವು. ಇದರೊಂದಿಗೆ ಜಾದುಗಾರರ ಮೋಡಿ ಕೂಡ ಮನಸೋರೆಗೊಂಡಿತು.
ವಿಮಾನ ನಿಲ್ದಾಣ ಆರಂಭವಾಗಿ 10 ವರ್ಷ ಸಂದ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಹಬ್ಬ ಆಚರಿಸುತ್ತಿದ್ದೇವೆ. ದಕ್ಷಿಣ ಭಾರತದಲ್ಲೇ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿದ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎಎಲ್ ಪಾತ್ರವಾಗಿದೆ.
ಜಾವಿದ್ ಮಲಿಕ್, ಬಿಐಎಎಲ್ ಸಿಒಒ